alex Certify
ಕನ್ನಡ ದುನಿಯಾ       Mobile App
       

Kannada Duniya

ಅಫ್ಘಾನಿಸ್ತಾನದ ‘ಬ್ರೂಸ್ಲಿ’ ಹೇಗಿದ್ದಾನೆ ಗೊತ್ತಾ…?

ಬ್ರೂಸ್ಲಿಯ ‘ಎಂಟರ್ ದಿ ಡ್ರ್ಯಾಗನ್’ ‘ರಿಟರ್ನ್ ಆಫ್ ದಿ ಡ್ರ್ಯಾಗನ್, ‘ಫಿಸ್ಟ್ ಆಫ್ ಪ್ಯೂರಿ’ ಯನ್ನು ಆಗಿನ ಕಾಲದಲ್ಲಿ ನೋಡಿದ ಎಷ್ಟೋ ಮಂದಿ ತಾವೂ ಅವನಂತಾಗಬೇಕೆಂದು ಕನಸು ಕಾಣುತ್ತಿದ್ದುದು ಸುಳ್ಳಲ್ಲ. ಇಂತಹ ಬ್ರೂಸ್ಲಿಯ ಸಾವಿನ ಕುರಿತು ಇಂದಿಗೂ ಆನೇಕ ಕಥೆಗಳು. ಚಾಲ್ತಿಯಲ್ಲಿವೆ. ಅಫ್ಘಾನಿಸ್ತಾನದಲೊಬ್ಬ ಯುವಕ ಬ್ರೂಸ್ಲಿಯನ್ನು ಅನುಕರಿಸುತ್ತಾ ಪ್ರಸಿದ್ದಿ ಪಡೆದಿದ್ದಾನೆ.

ಇದೇನಾಪ್ಪ ಬ್ರೂಸ್ಲಿ ತಾಲಿಬಾನ್ ಪ್ರಾಬಲ್ಯವಿರುವ ಅಫ್ಘಾನಿಸ್ತಾನದಂತಹ ರಾಷ್ಟ್ರದಲ್ಲಿ ಏನು ಮಾಡುತ್ತಿದ್ದಾನೆಂದು ಹುಬ್ಬೇರಿಸಬೇಡಿ. ಈತ ನೂರಕ್ಕೆ ನೂರು ಬ್ರೂಸ್ಲಿಯಂತೆ ಕಾಣುವ ಅಬ್ಬಾಸ್ ಆಲಿಜಾದಾ. ಕೇವಲ ಕಾಣುವುದು ಮಾತ್ರವಲ್ಲ ಬ್ರೂಸ್ಲಿಯಂತೆ ಕುಂಗ್ ಫೂ ಪಟ್ಟುಗಳನ್ನೂ ಬಲ್ಲ. ಈತನನ್ನು ಸ್ನೇಹಿತರು ಅಫ್ಘಾನ್ ಬ್ರೂಸ್ಲಿ ಎಂದೇ ಕರೆಯುತ್ತಾರೆ.

ಬ್ರೂಸ್ಲಿಯಂತೆ ಕಾಣುತ್ತಿದ್ದ ಈತ ಟಿವಿಯಲ್ಲಿ ಬ್ರೂಸ್ಲಿಯ ಸಿನಿಮಾಗಳನ್ನು ನೋಡಿ ನೋಡಿಯೇ ಅವನಂತೆ ಕುಂಗ್ ಫೂ ಸ್ಟಂಟ್ ಮಾಡುವುದನ್ನು ಕಲಿತ. ಯಾವಾಗ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಆರಂಭವಾಯಿತೋ ಟಿವಿ, ಇಂಟರ್ ನೆಟ್ ಎಲ್ಲವೂ ಬಂದ್ ಆದ ಕಾರಣ ಅಬ್ಬಾಸ್ ನ ಬ್ರೂಸ್ಲಿ ಕನಸು ಕಮರಿ ಹೋಗಿತ್ತು.

ಸೆಪ್ಟೆಂಬರ್ 11 ರ ಅಮೆರಿಕ ದಾಳಿ ನಂತರ ಅಫ್ಘಾನಿಸ್ತಾನದ ಮೇಲೆ ಮುಗಿಬಿದ್ದ ಅಮೆರಿಕ ಪಡೆಗಳು ತಾಲಿಬಾನಿಗಳನ್ನು ಸದೆಬಡಿದು ಮತ್ತೆ ಅಲ್ಲಿ ಪ್ರಜಾಪ್ರಭುತ್ವ ಜಾರಿಗೊಳಿಸಿದ ನಂತರ ಅಬ್ಬಾಸನ ಕನಸುಗಳಿಗೆ ಜೀವ ಬಂದಿದೆ. ಟಿವಿ ನೋಡುತ್ತಾ ಬ್ರೂಸ್ಲಿ ತರಹದ ಸ್ಟಂಟ್ ಗಳನ್ನು ಪುನಃ ಆರಂಭಿಸಿದ್ದಾನೆ.

ಅತ್ಯಂತ ಬಡ ಕುಟುಂಬದ 10 ಮಂದಿ ಸದಸ್ಯರಲ್ಲಿ ಒಬ್ಬನಾಗಿರುವ ಅಬ್ಬಾಸ್ ಗೆ ತಾನೂ ಹಾಲಿವುಡ್ ನಟನಾಗಿ ಮಿಂಚಬೇಕೆಂಬ ಆಸೆಯಿದೆ. ಆದರೆ ತಾನಿರುವ ದೇಶದಲ್ಲಿ ಪ್ರತಿ ನಿತ್ಯವೂ ಸಾವಿನ ಜೊತೆ ಸೆಣಸಾಡುತ್ತಾ ಬದುಕಬೇಕಾದ ಅನಿವಾರ್ಯತೆಯಿರುವುದರಿಂದ ಸಾಯುವುದರೊಳಗಾಗಿ ತನ್ನ ಕನಸು ಈಡೇರುವುದೇ ಎಂದು ಕಾದು ಕುಳಿತಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...