alex Certify
ಕನ್ನಡ ದುನಿಯಾ       Mobile App
       

Kannada Duniya

ಅಳುವ ಕಂದನ ಆರೈಕೆ ಮಾಡುತ್ತ ಪರೀಕ್ಷೆ ಬರೆದ ಬಾಣಂತಿ

ಅಫ್ಘಾನಿಸ್ತಾನದಲ್ಲಿ ಮಹಿಳೆಯೊಬ್ಬಳು ತನ್ನ ಮಗುವಿನ ಆರೈಕೆ ಮಾಡುತ್ತಲೇ ಪರೀಕ್ಷೆ ಬರೆದಿದ್ದಾಳೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 25 ವರ್ಷದ ಜಹಾಂ ತಾಬ್ ಎಂಬ ಮಹಿಳೆ ಅಫ್ಘಾನಿಸ್ತಾನದ ಡೇಕುಂಡಿ ನಿವಾಸಿ.

پیشنهاد خوبی است

Posted by Yahya Erfan on Monday, March 19, 2018

ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ಆಕೆ ಪ್ರವೇಶ ಪರೀಕ್ಷೆ ತೆಗೆದುಕೊಂಡಿದ್ಲು. ಆದ್ರೆ ಪರೀಕ್ಷೆ ಬರೆಯಲು ಆರಂಭಿಸುತ್ತಿದ್ದಂತೆ ಆಕೆಯ 2 ತಿಂಗಳ ಹಸುಗೂಸು ಒಂದೇ ಸಮನೆ ಅಳಲಾರಂಭಿಸಿತ್ತು. ಬಳಿಕ ಆಕೆ ತೊಡೆಯ ಮೇಲೆ ಮಗುವನ್ನು ಮಲಗಿಸಿಕೊಂಡು, ನೆಲದ ಮೇಲೆ ಕುಳಿತೇ ಪರೀಕ್ಷೆ ಬರೆದಿದ್ದಾಳೆ.

ಅಳುತ್ತಿದ್ದ ಮಗುವನ್ನು ಸುಮ್ಮನಾಗಿಸಲು ಜಹಾಂ ತಾಬ್, ತಾನು ಕುಳಿತಿದ್ದ ಡೆಸ್ಕ್ ನಿಂದ ಕೆಳಕ್ಕೆ ಬಂದು ನೆಲದ ಮೇಲೆ ಕುಳಿತು ಪರೀಕ್ಷೆ ಬರೆದಿದ್ದಾಳೆ. ಯೂನಿವರ್ಸಿಟಿಯ ಪ್ರಾಧ್ಯಾಪಕರೊಬ್ಬರು ಜಹಾಂ ತಾಬ್ ಳ ಫೋಟೋ ಕ್ಲಿಕ್ಕಿಸಿ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...