alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಲತಾಣದಲ್ಲಿ ಸಖತ್ ಫೇಮಸ್ ಆಗಿದ್ದಾರೆ ಈ ಅವಳಿಗಳು….

ಇಸಾಬೆಲ್ಲಾ ಹಾಗೂ ಗೇಬ್ರಿಯೆಲ್ಲಾ ಶಿಪ್ಲಿ 7 ತಿಂಗಳ ಕಂದಮ್ಮಗಳು. ಈ ಅವಳಿಗಳನ್ನು ನೋಡಿದ್ರೆ ಎಂಥವರೂ ಅಚ್ಚರಿಪಡ್ತಾರೆ. ಯಾಕಂದ್ರೆ ಅವಳಿಗಳಾದ್ರೂ ಇಬ್ಬರ ಕಲರ್ ಮಾತ್ರ ಬೇರೆ ಬೇರೆ. ಒಂದು ಮಗು ಬೆಳ್ಳಗಿದ್ರೆ, ಇನ್ನೊಂದು ಮಗುವಿನದ್ದು ಕೃಷ್ಣ ವರ್ಣ.

ಇನ್ ಸ್ಟಾಗ್ರಾಮ್ನಲ್ಲಿ ಈ ಪುಟಾಣಿಗಳು ಮೋಡಿ ಮಾಡಿದ್ದಾರೆ. ಕ್ಲೆಮೆಂಟೀನ್ ಗೆ ಮೂವರು ಮಕ್ಕಳಿದ್ದಾರೆ. ಮೊದಲ ಮಗಳು ಏಂಜಲೀನಾಗೆ ಈಗ ಎರಡು ವರ್ಷ. ಕಳೆದ ಜುಲೈನಲ್ಲಿ ಕ್ಲೆಮೆಂಟೀನ್ ಇನ್ ಸ್ಟಾಗ್ರಾಮ್ ಖಾತೆ ಆರಂಭಿಸಿದ್ದಾಳೆ. 7 ತಿಂಗಳ ಅವಳಿಗಳ ಫೋಟೋ ವೈರಲ್ ಆಗಿದೆ.

ಈವರೆಗೆ ಕ್ಲೆಮೆಂಟೀನ್ ಅವಳಿಗಳ 240 ಫೋಟೋಗಳನ್ನು ಪೋಸ್ಟ್ ಮಾಡಿದ್ದಾಳೆ. ಈ ಅವಳಿಗಳಿಗೆ 19,000ಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಒಂದು ಮಗು ತಂದೆಯನ್ನು ಹೋಲುತ್ತಿದ್ರೆ, ಇನ್ನೊಂದು ಅಮ್ಮನಂತಿದೆ. ತಂದೆ-ತಾಯಿ ಇಬ್ಬರೂ ಬೇರೆ ಬೇರೆ ಜನಾಂಗದವರು.

ಒಬ್ಬರು ಆಫ್ರಿಕಾದವರಾದ್ರೆ, ಇನ್ನೊಬ್ಬರು ಅಮೆರಿಕದವರು. ಹಾಗಾಗಿ ಅವಳಿಗಳ ಮೈಬಣ್ಣ ಬೇರೆಬೇರೆಯಾಗಿದೆ. ಬಣ್ಣ ಹೇಗೇ ಇದ್ರೂ ಡಿಫರೆಂಟ್ ಅವಳಿಗಳು ಸಖತ್  ಕ್ಯೂಟಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...