alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವರ ಮದುವೆ ಮಂಟಪದಲ್ಲೇ…!

vara

ಲಂಡನ್: ಮದುವೆ ಎಂದರೆ ನವಜೋಡಿಗೆ ಆಗುವ ಸಂಭ್ರಮವೇ ಬೇರೆ. ಅದನ್ನು ಮಾತಿನಲ್ಲಿ ಹೇಳಲಾಗದು. ಹೊಸ ಜೀವನಕ್ಕೆ ಕಾಲಿಡುವ ನವಜೋಡಿಗಳು ಬಂಧು- ಬಾಂಧವರ, ಸ್ನೇಹಿತರ ಸಮ್ಮುಖದಲ್ಲಿ ಸಂಭ್ರಮ ವ್ಯಕ್ತಪಡಿಸುವುದನ್ನು ನೋಡಿರುತ್ತೀರಿ.

ಆದರೆ ಮದುವೆ ಮನೆಯಲ್ಲೇ ವರ ಕಣ್ಣೀರಿಟ್ಟ ಘಟನೆ ಲಂಡನ್ ನಲ್ಲಿ ನಡೆದಿದೆ. ಮದುವೆಯಲ್ಲಿ ಸಾಮಾನ್ಯವಾಗಿ ಹೆಣ್ಣುಮಕ್ಕಳು ಕಣ್ಣೀರು ಹಾಕುತ್ತಾರೆ. ಆದರೆ, ಈ ಪ್ರಕರಣದಲ್ಲಿ ವರನೇ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ತವರು ಮನೆಯಿಂದ ಗಂಡನ ಮನೆಗೆ ಹೋಗುವುದನ್ನು ನೆನೆದು ಹೆಣ್ಣುಮಕ್ಕಳು ಮದುವೆಯಲ್ಲಿ ಕಣ್ಣೀರಿಡುತ್ತಾರೆ. ಅದೇ ರೀತಿ ಯುವಕನೂ ಗೋಳೋ ಎಂದು ಕಣ್ಣೀರಿಟ್ಟಿದ್ದಾನೆ. ಆತನಿಗೆ ಸಮಾಧಾನ ಮಾಡಿದರೂ ಅಳು ನಿಂತಿರಲಿಲ್ಲ.

ಮದುವೆ ಸಂಭ್ರಮ ಮನೆಮಾಡಿರುವಾಗ ವಧು ಬರುವುದನ್ನು ಕಂಡ ವರ ದುಃಖ ತಡೆಯಲಾಗದೇ ಅಳುವುದನ್ನು ಕಂಡ ಅಲ್ಲಿದ್ದವರು ಸಮಾಧಾನ ಮಾಡಿದ್ದಾರೆ. ಆದರೂ, ಆತನ ದುಃಖ ಕಡಿಮೆಯಾಗಿಲ್ಲ. ಕೊನೆಗೆ ವಧು ಸಮೀಪಕ್ಕೆ ಬಂದು ಸಮಾಧಾನ ಮಾಡಿದ್ದಾಳೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...