alex Certify
ಕನ್ನಡ ದುನಿಯಾ       Mobile App
       

Kannada Duniya

ಸದ್ದು ಮಾಡ್ತಿದೆ ಸರ್ವಾಧಿಕಾರಿ ಹಿಟ್ಲರ್ ಬಳಸಿದ್ದ ಫೋನ್

hitler-pone

ವಾಷಿಂಗ್ಟನ್: ವಿಶ್ವ ಕಂಡ ಅತಿ ಕ್ರೂರ ವ್ಯಕ್ತಿ ಎಂದೇ ಹೇಳಲಾಗುವ ನಾಜಿ ನಾಯಕ, ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಬಳಸಿದ್ದ ಫೋನ್ ಅನ್ನು ಹರಾಜಿಗೆ ಇಡಲಾಗಿದೆ.

ಅಮೆರಿಕದ ಮೇರಿ ಲ್ಯಾಂಡ್ ರಾಜ್ಯದಲ್ಲಿನ ಚೆಸಾಪೀಕೆ ನಗರದಲ್ಲಿ, ಹಿಟ್ಲರ್ ಬಳಸಿದ್ದ ಈ ಫೋನ್ ಅನ್ನು ಹರಾಜಿಗೆ ಇಡಲಾಗಿದ್ದು, 1 ಲಕ್ಷ ಡಾಲರ್ ಆರಂಭಿಕ ಬೆಲೆಯನ್ನು ನಿಗದಿಪಡಿಸಲಾಗಿದೆ.

ಅಲೆಕ್ಸಾಂಡರ್ ಹಿಸ್ಟಾರಿಕಲ್ ಆಕ್ಷನ್ಸ್ ಹೌಸ್ ಸಂಸ್ಥೆ, ಹರಾಜಿನಲ್ಲಿ ಹಿಟ್ಲರ್ ಫೋನ್ ಗೆ 1 ಲಕ್ಷ ಡಾಲರ್ ಆರಂಭಿಕ ಬೆಲೆಯನ್ನು ನಿಗದಿ ಮಾಡಿದ್ದರೂ, 3 ಲಕ್ಷ ಡಾಲರ್ ವರೆಗೂ ಹರಾಜಾಗುವ ನಿರೀಕ್ಷೆ ಇದೆ ಎಂದು ತಿಳಿಸಿದೆ.

ಇದನ್ನು ‘ವೆಪನ್ ಆಫ್ ಮಾಸ್ ಡಿಸ್ಟ್ರಕ್ಷನ್’ ಎಂದು ಕರೆಯಲಾಗುತ್ತದೆ. 2 ನೇ ಮಹಾಯುದ್ಧದ ವೇಳೆ ಹಿಟ್ಲರ್ ಈ ಫೋನ್ ಮೂಲಕವೇ ಆದೇಶ ನೀಡುತ್ತಿದ್ದ.

1945 ರಲ್ಲಿ ಬರ್ಲಿನ್ ಬಂಕರ್ ನಲ್ಲಿ ರಷ್ಯಾ ಸೇನೆ ವಶಪಡಿಸಿಕೊಂಡಿದ್ದ ಈ ಫೋನ್ ಕಪ್ಪು ಬಣ್ಣದಾಗಿತ್ತು. ಹಿಟ್ಲರ್ ಕ್ರೂರತೆಯನ್ನು ಬಿಂಬಿಸಲು ಇದಕ್ಕೆ ಕೆಂಪು ಬಣ್ಣ ಹಾಗೂ ನಾಜಿ ಸೇನೆಯ ಸ್ವಸ್ತಿಕ್ ಚಿಹ್ನೆ ಹಾಕಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...