alex Certify
ಕನ್ನಡ ದುನಿಯಾ       Mobile App
       

Kannada Duniya

ಅದ್ನಾನ್ ಸಾಮಿ ಸಿಬ್ಬಂದಿಗೆ ಕುವೈತ್ ವಿಮಾನ ನಿಲ್ದಾಣದಲ್ಲಿ ಅವಮಾನ

ಹೆಸರಾಂತ ಗಾಯಕ ಅದ್ನಾನ್ ಸಾಮಿಯ ನಾಲ್ವರು ಸಿಬ್ಬಂದಿಗಳಿಗೆ ಕುವೈತ್ ಏರ್ ಪೋರ್ಟ್ ನಲ್ಲಿ ಅವಮಾನ ಮಾಡಲಾಗಿದೆ. ಇಮ್ಮಿಗ್ರೇಷನ್ ಇಲಾಖೆಯ ಅಧಿಕಾರಿಗಳು ಗಾಯಕನ ಸಿಬ್ಬಂದಿಗಳಿಗೆ ಇಂಡಿಯನ್ ಡಾಗ್ಸ್ ಎಂದು ಕರೆದಿದ್ದಾರೆ.

ಅದ್ನಾನ್ ಸಾಮಿ ಕಾರ್ಯಕ್ರಮವೊಂದರ ಪ್ರಯುಕ್ತ ಕುವೈತಿಗೆ ತಮ್ಮ ಸಿಬ್ಬಂದಿಯೊಂದಿಗೆ ತೆರಳಿದ್ರು. ಆದ್ರೆ ಈ ವೇಳೆ ಏರ್ ಪೋರ್ಟ್ ನಲ್ಲಿ ಅವರ ಸಿಬ್ಬಂದಿಗೆ ಇಂಡಿಯನ್ ಡಾಗ್ಸ್ ಎಂದು ಕರೆದಿದ್ದಾರೆ. ಇದು ಅದ್ನಾನ್ ಸಾಮಿ ಆಕ್ರೋಶಕ್ಕೆ ಕಾರಣವಾಗಿದೆ.

ಈ ಸಂಬಂಧ ಟ್ವೀಟ್ ಮಾಡಿದ್ದು, ನಾವು ನಿಮ್ಮ ದೇಶಕ್ಕೆ ಪ್ರೀತಿಯಿಂದ ಬರುತ್ತೇವೆ. ಆದ್ರೆ ನಿಮ್ಮಿಂದ ನಮಗೆ ಯಾವುದೇ ಬೆಂಬಲವಿಲ್ಲ. ಏರ್ ಪೋರ್ಟ್ ನಲ್ಲಿ ಯಾವುದೇ ಕಾರಣವಿಲ್ಲದೆ ನನ್ನ ಭಾರತೀಯ ಸಿಬ್ಬಂದಿಗಳನ್ನು ನಾಯಿಗಳೆಂದು ಕರೆದಿದ್ದಾರೆ. ಇಂತಹ ಹೇಳಿಕೆ ನೀಡಲು ನಿಮಗೆಷ್ಟು ಧೈರ್ಯ ಅಂತಾ ಟ್ವಿಟರ್ ನಲ್ಲಿಯೇ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇದೇ ಟ್ವೀಟ್ ಅನ್ನು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಗೃಹ ಸಚಿವ ರಾಜ್ ನಾಥ್ ಸಿಂಗ್ ಅವರಿಗೂ ಟ್ಯಾಗ್ ಮಾಡಿದ್ದಾರೆ. ಇನ್ನು ಅದ್ನಾನ್ ಸಾಮಿ ಟ್ವೀಟ್ ಗೆ ತಕ್ಷಣವೇ ಪ್ರತಿಕ್ರಿಯಿಸಿರುವ ಸುಷ್ಮಾ ಸ್ವರಾಜ್, ಕರೆ ಮಾಡುವಂತೆ ತಿಳಿಸಿದ್ದಾರೆ. ಘಟನೆ ಸಂಬಂಧ ಕುವೈತ್ ನ ರಾಯಭಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ತಕ್ಷಣದ ಪ್ರತಿಕ್ರಿಯೆಗೆ ಅದ್ನಾನ್ ಸಾಮಿ ಫುಲ್ ಖುಷಿಯಾಗಿದ್ದಾರೆ. ಇನ್ನು ಅದ್ನಾನ್ ಸಾಮಿ ಟ್ವೀಟ್ ಗೆ ಪ್ರತಿಕ್ರಿಯೆಗಳು ಹರಿದು ಬರ್ತಿದ್ದು, ಕುವೈತ್ ಏರ್ ಪೋರ್ಟ್ ನಲ್ಲಿ ನಡೆದ ಘಟನೆಯನ್ನು ಜನರು ತೀವ್ರವಾಗಿ ಖಂಡಿಸುತ್ತಿದ್ದಾರೆ. ಅಷ್ಟೇ ಅಲ್ಲ ಕುವೈತ್ ವಿಮಾನ ನಿಲ್ದಾಣದ ಅಧಿಕಾರಿಗಳು, ಅದ್ನಾನ್ ಸಾಮಿ ಮತ್ತವರ ಸಿಬ್ಬಂದಿಯ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...