alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿನಲ್ಲೂ ಮಗಳಿಗೆ ಜೊತೆಯಾದ ಹಾಲಿವುಡ್ ನಟಿ

actress

1950 ಮತ್ತು 60 ರ ದಶಕದಲ್ಲಿ ಹಾಲಿವುಡ್ ಅನ್ನು ಆಳಿದ ಖ್ಯಾತ ನಟಿ ಹಾಗೂ ಗಾಯಕಿ ಡೆಬ್ಬಿ ರೆನಾಲ್ಡ್ಸ್ ಇನ್ನಿಲ್ಲ. ಮಗಳು ಕ್ಯಾರಿ ಫಿಶರ್ ನಿಧನದ ಒಂದು ದಿನದ ಬಳಿಕ ಡೆಬ್ಬಿ ಕೂಡ ಇಹಲೋಕ ತ್ಯಜಿಸಿದ್ದಾರೆ.

ರೆನಾಲ್ಡ್ಸ್ ಅವರಿಗೆ 84 ವರ್ಷ ವಯಸ್ಸಾಗಿತ್ತು. ಆಸ್ಕರ್ ಗೂ ನಾಮನಿರ್ದೇಶನಗೊಂಡಿದ್ದ ನಟಿ ಹಾಗೂ ಗಾಯಕಿ ಈಕೆ. ಮಗಳ ನಿಧನದಿಂದ ಜರ್ಜರಿತರಾಗಿದ್ದ ಡೆಬ್ಬಿಗೆ ಬುಧವಾರ ಬೆಳಗ್ಗೆ ಹೃದಯಾಘಾತವಾಗಿದೆ.

ಮಗಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿಯೂ, ಅವಳ ಜೊತೆ ಬೇಕೆನಿಸಿದೆ ಅಂತಾ ಡೆಬ್ಬಿ ಹೇಳಿದ್ದರು. ಅದೇ ಅವರ ಕೊನೆಯ ಮಾತು, ಹೃದಯಾಘಾತದಿಂದ ಚೇತರಿಸಿಕೊಳ್ಳದ ನಟಿ ನಿಧನರಾಗಿದ್ದಾರೆ. ಪುತ್ರಿ ಕ್ಯಾರಿ ಫಿಶರ್ ಕೂಡ ಖ್ಯಾತ ನಟಿಯಾಗಿದ್ದರು, ಆದ್ರೆ ಡ್ರಗ್ಸ್ ಚಟ ಅಂಟಿಸಿಕೊಂಡು ಅನಾರೋಗ್ಯಕ್ಕೆ ತುತ್ತಾಗಿದ್ದ ಕ್ಯಾರಿಗೆ 60 ವರ್ಷ ವಯಸ್ಸಾಗಿತ್ತು. ಕೆಲ ವರ್ಷಗಳಿಂದೀಚೆಗೆ ಡೆಬ್ಬಿ ರೆನಾಲ್ಡ್ಸ್ ಕೂಡ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು, ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಆದ್ರೆ ಆಕೆಗೆ ಯಾವ ಸಮಸ್ಯೆ ಇತ್ತು ಅನ್ನೋದನ್ನು ಕುಟುಂಬದವರು ಬಹಿರಂಗಪಡಿಸಿರಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...