alex Certify
ಕನ್ನಡ ದುನಿಯಾ       Mobile App
       

Kannada Duniya

ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುತ್ತಿದೆ ಪಾಕ್…!

ಭಯೋತ್ಪಾದನೆ ನಿಗ್ರಹ ಹೆಸರಿನಲ್ಲಿ ಹಲವು ವರ್ಷಗಳಿಂದ ಅಮೆರಿಕಾದಿಂದ ಕೋಟ್ಯಾಂತರ ಡಾಲರ್ ಆರ್ಥಿಕ ನೆರವು ಪಡೆಯುತ್ತಾ ಪರೋಕ್ಷವಾಗಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದ ಪಾಕಿಸ್ತಾನಕ್ಕೆ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸರಿಯಾದ ಹೊಡೆತವನ್ನೇ ನೀಡಿದ್ದಾರೆ.

ಪಾಕಿಸ್ತಾನದ ಇಬ್ಬಂದಿತನವನ್ನು ಕಟುವಾಗಿ ಟೀಕಿಸಿದ್ದ ಟ್ರಂಪ್, ಇದುವರೆಗೂ ನೀಡುತ್ತಿದ್ದ ಆರ್ಥಿಕ ನೆರವಿಗೆ ತಡೆಯೊಡ್ಡುತ್ತಲೇ ಕಂಗಾಲಾಗಿರುವ ಪಾಕಿಸ್ತಾನ, ಹೊಸ ವರಸೆ ಶುರು ಮಾಡಿದೆ. ಅಮೆರಿಕಾ ಅಧ್ಯಕ್ಷರ ಕಿಡಿ ನುಡಿಯ ಟ್ವೀಟ್ ಬಳಿಕ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನೇತೃತ್ವದ ಉಗ್ರ ಸಂಘಟನೆ ಜಮಾತ್ ಉದ್ ದವಾ ಮತ್ತು ಫಲಾಹ್ ಇ ಇನ್ಸಾನಿಯತ್ ಫೌಂಡೇಶನ್ ಗೆ ಪಾಕಿಸ್ತಾನ ಲಗಾಮು ಹಾಕಿದೆ. ದೇಣಿಗೆ ಸಂಗ್ರಹಿಸದಂತೆ ನಿರ್ಬಂಧಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖುರ್ರಮ್ ದಸ್ತಗೀರ್ ಖಾನ್, ಅಮೆರಿಕಾದ ಒತ್ತಡದ ಕಾರಣಕ್ಕೆ ಈ ಕ್ರಮ ಕೈಗೊಂಡಿಲ್ಲ. ಭಯೋತ್ಪಾದನೆ ನಿರ್ಮೂಲನೆ ಮಾಡಲು ಪಾಕಿಸ್ತಾನ ಕಟಿಬದ್ದವಾಗಿದ್ದು, ಸರ್ಕಾರದ ಏಜೆನ್ಸಿಗಳ ಮಾಹಿತಿಯನ್ನನುಸರಿಸಿ ದಿಟ್ಟ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿಕೊಂಡಿದ್ದಾರೆ. ನೆರವು ಕಡಿತಗೊಳಿಸುವ ಅಮೆರಿಕಾದ ನಿರ್ಧಾರದ ಬಳಿಕ ಚೀನಾ ಬೆಂಬಲಕ್ಕೆ ನಿಂತಿತ್ತಾದರೂ ಪಾಕಿಸ್ತಾನ, ಅನಿವಾರ್ಯ ಕಾರಣಕ್ಕೆ ಹಫೀಜ್ ಸಹೀದ್ ನೇತೃತ್ವದ ಸಂಘಟನೆಗಳ ವಿರುದ್ದ ಕ್ರಮಕ್ಕೆ ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...