alex Certify
ಕನ್ನಡ ದುನಿಯಾ       Mobile App
       

Kannada Duniya

ಆ್ಯಸಿಡ್ ದಾಳಿ ಸಂತ್ರಸ್ಥೆಯ ಫೋಟೋ ನೋಡಿ ದಂಗಾಗಿದ್ದಾರೆ ಜನ

ಆ್ಯಸಿಡ್ ಸಂತ್ರಸ್ಥೆ ರೇಷಮ್ ಖಾನ್ ನಿಜಕ್ಕೂ ಗಟ್ಟಿಗಿತ್ತಿ. ಇತರರಿಗೆ ಪ್ರೇರಣೆಯಾಗಬಲ್ಲ ಮಹಿಳೆ. ಕೆಲ ತಿಂಗಳುಗಳ ಹಿಂದಷ್ಟೆ ಸಾಮಾಜಿಕ ತಾಣಗಳಲ್ಲಿ ತಮ್ಮ ಫೋಟೋಗಳನ್ನು ರೇಷಮ್ ಶೇರ್ ಮಾಡಿದ್ಲು. ಈಗಲೂ ಯಾವುದೇ ಹಿಂಜರಿಕೆಯಿಲ್ಲದೆ ಸೆಲ್ಫಿ ಪೋಸ್ಟ್ ಮಾಡಿದ್ದಾಳೆ.

ಜೂನ್ 21ರಂದು ಹುಟ್ಟುಹಬ್ಬದ ದಿನದಂದೇ ಲಂಡನ್ ನಲ್ಲಿ ರೇಷಮ್ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು. ಅಕ್ಟೋಬರ್ 29ರಂದು ತನ್ನ ಸೆಲ್ಫಿಯೊಂದನ್ನು ರೇಷಮ್ ಪೋಸ್ಟ್ ಮಾಡಿದ್ದಾಳೆ. ಅದಕ್ಕೆ ಈಗಾಗ್ಲೇ 1800ಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಆ್ಯಸಿಡ್ ದಾಳಿ ನಂತರ ಅವಳಲ್ಲಾದ ಬದಲಾವಣೆ ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ.

ಈದ್ ವೇಳೆ ಆಕೆ ಹಾಕಿದ್ದ ಫೋಟೋ ನೋಡಿ ಕೆಲವರು ಎಡಿಟೆಡ್ ಅಂತಾ ಹೇಳಿದ್ದರು. ನಂತರ ಆಕೆ ಯಾವುದೇ ಮೇಕಪ್ ಇಲ್ಲದೆ ತನ್ನ ರಿಯಲ್ ಫೋಟೋವನ್ನು ಕೂಡ ಪೋಸ್ಟ್ ಮಾಡಿದ್ದಳು. ಆ್ಯಸಿಡ್ ದಾಳಿಯಿಂದ ರೇಷಮ್ ಳ ಮುಖ ಪೂರ್ತಿ ಬೆಂದು ಹೋಗಿತ್ತು. ಆದ್ರೆ ಈಗ ಆಕೆ ಮತ್ತೆ ಮೊದಲಿನಂತಾಗುತ್ತಿದ್ದಾಳೆ. ಸಂಪೂರ್ಣ ಚಿಕಿತ್ಸೆ ಬಳಿಕ ತಾನು ಮೊದಲಿನಂತಾಗುತ್ತೇನೆಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾಳೆ ರೇಷಮ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...