alex Certify
ಕನ್ನಡ ದುನಿಯಾ       Mobile App
       

Kannada Duniya

ಬಾತ್ ಟಬ್ ನಲ್ಲಿ ಮುಳುಗಿ ಸಾವನ್ನಪ್ಪುವ ಪ್ರಕರಣಗಳು ಅಪರೂಪವೇನಲ್ಲ

ಆಕಸ್ಮಿಕವಾಗಿ ಮುಳುಗಿ ಸಾವು ಅನ್ನೋದು ಸಹಜವಲ್ಲ ಅನ್ನೋ ಚರ್ಚೆ ಈಗ ಜೋರಾಗಿದೆ. ಶ್ರೀದೇವಿ ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಅನ್ನೋ ದುಬೈ ಆಸ್ಪತ್ರೆಯ ಮರಣೋತ್ತರ ವರದಿ ಚರ್ಚೆಯನ್ನು ಹುಟ್ಟುಹಾಕಿದೆ.

ಆದ್ರೆ ಈ ರೀತಿಯ ದುರಂತ ಸಾವು ಜಪಾನ್ ಹಾಗೂ ಅಮೆರಿಕದಲ್ಲಿ ಸರ್ವೇಸಾಮಾನ್ಯ. ವೈದ್ಯಕೀಯ ಜಗತ್ತಿನಲ್ಲಿ ಸಾಕಷ್ಟು ಮುಂದುವರಿದ ದೇಶಗಳಾಗಿದ್ದರೂ ಇಂತಹ ಸಾವನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. 2017ರ ಮಾರ್ಚ್ ನಲ್ಲಿ ಜರ್ನಲ್ ಆಫ್ ಜನರಲ್ & ಫ್ಯಾಮಿಲಿ ಮೆಡಿಸಿನ್ ಈ ಬಗ್ಗೆ ಅಧ್ಯಯನ ನಡೆಸಿದೆ.

ಈ ರೀತಿ ಸ್ನಾನಕ್ಕೆ ಸಂಬಂಧಿಸಿದಂತಹ ದುರ್ಘಟನೆಗಳಲ್ಲಿ ಜಪಾನ್ ನಲ್ಲಿ ಪ್ರತಿವರ್ಷ 19,000 ಜನರು ಸಾವನ್ನಪ್ಪುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ಬಾತ್ ಟಬ್ ನಲ್ಲಿ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಶೇ.70 ರಷ್ಟು ಏರಿಕೆಯಾಗಿದೆ.

ಈ ರೀತಿ ಮರಣ ಹೊಂದುತ್ತಿರುವವರ ಪೈಕಿ 10 ರಲ್ಲಿ 9 ಮಂದಿ 60 ವರ್ಷಕ್ಕೂ ಮೇಲ್ಪಟ್ಟಿರುವವರು. ಜಪಾನ್ ನಲ್ಲಿ ಸ್ನಾನಕ್ಕೆ ಬಳಸುವ ನೀರು 40 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಯಾಗಿರುತ್ತದೆ. ಜೊತೆಗೆ ಬಾತ್ ಟಬ್ ಗಳು ಕೂಡ ಆಳವಾಗಿರುತ್ತವೆ.

ಇನ್ನು ಅಮೆರಿಕದಲ್ಲಿ ಹಾಟ್ ಟಬ್, ಸ್ಪಾ ಅಥವಾ ಬಾತ್ ಟಬ್ ನಲ್ಲಿ ಮುಳುಗಿ ಪ್ರತಿದಿನ ಕನಿಷ್ಟ ಒಬ್ಬರು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಕಾರಣ ಅಲ್ಕೋಹಾಲ್ ಹಾಗೂ ಡ್ರಗ್ಸ್ ನಶೆ. ಈ ರೀತಿ ಮರಣ ಹೊಂದುತ್ತಿರುವವರಲ್ಲಿ ಮಹಿಳೆಯರೇ ಅಧಿಕ. ಚಿಕ್ಕದಾಗಿದ್ರೂ ಬಾತ್ ರೂಮ್ ತುಂಬಾ ಡೇಂಜರಸ್ ಜಾಗ ಎನ್ನುತ್ತಾರೆ ತಜ್ಞರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...