alex Certify
ಕನ್ನಡ ದುನಿಯಾ       Mobile App
       

Kannada Duniya

ಲಾಹೋರ್ ನಲ್ಲಿ ಭೀಕರ ಬಾಂಬ್ ಸ್ಫೋಟ : 16 ಮಂದಿ ಬಲಿ

548102-lahore-blast

ಪಾಕಿಸ್ತಾನದ ಲಾಹೋರ್ ನಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರಿದಿದ್ದಾರೆ. ಪಾಕಿಸ್ತಾನದ ಪಂಜಾಬ್ ಅಸೆಂಬ್ಲಿ ಹೊರಭಾಗದಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟಿಸಿದ್ದಾರೆ. ಈ ವಿಧ್ವಂಸಕ ಕೃತ್ಯದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ 16 ಮಂದಿ ಬಲಿಯಾಗಿದ್ದಾರೆ. ಸುಮಾರು 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ, ಈ ಪೈಕಿ 11 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.

ಲಾಹೋರ್ ನ ಸಂಚಾರಿ ಪೊಲೀಸ್ ಇಲಾಖೆಯ ಮುಖ್ಯಸ್ಥ ಅಹ್ಮದ್ ಮೊಬೀನ್, ಹಿರಿಯ ಎಸ್ಪಿ ಜಾಹಿದ್ ಗೊಂಡಲ್ ಹಾಗೂ ಡಿಎಸ್ಪಿ ಪರ್ವೇಜ್ ಬಟ್ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಪ್ರತಿಭಟನಾ ರ್ಯಾಲಿ ವೇಳೆ ಭಯೋತ್ಪಾದಕರು ಆತ್ಮಹತ್ಯಾ ಬಾಂಬ್ ಸ್ಫೋಟಿಸಿದ್ದಾರೆ.

ಬಲೂಚಿಸ್ತಾನದಲ್ಲಿ ಕರ್ತವ್ಯದಲ್ಲಿದ್ದಾಗ್ಲೇ ಮೊಬೀನ್ ಅವರ ಮೇಲೆ ದಾಳಿ ನಡೆದಿತ್ತು, ಅದೃಷ್ಟವಶಾತ್ ಅವರು ಬಚಾವಾಗಿದ್ದರು. ಈ ದಾಳಿ ಕೂಡ ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡೇ ನಡೆದಿದೆ ಅಂತಾ ಹೇಳಲಾಗ್ತಿದೆ. ಪ್ರತಿಭಟನಾಕಾರರ ಮನವೊಲಿಸಲು ಮೊಬೀನ್ ಆಗಮಿಸಿ ಕೆಲವೇ ಕ್ಷಣಗಳ ಬಳಿಕ ಬಾಂಬ್ ಸ್ಫೋಟಿಸಲಾಗಿದೆ. ಮೋಟರ್ ಸೈಕಲ್ ನಲ್ಲಿ ಬಂದ ಉಗ್ರ ಪೊಲೀಸ್ ಅಧಿಕಾರಿಯ ಸನಿಹಕ್ಕೆ ಆಗಮಿಸಿ ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...