alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕಿಸ್ತಾನದಲ್ಲಿ ತೆರೆ ಕಾಣಲ್ಲ ‘ದಂಗಲ್’

dangal_

ಅಮೀರ್ ಖಾನ್ ಅಭಿನಯದ ‘ದಂಗಲ್’ ಚಿತ್ರ ಬಿಡುಗಡೆಗೂ ಮುನ್ನವೆ ಸಾಕಷ್ಟು ಹೆಸರು ಗಳಿಸಿದೆ. ಚಿತ್ರ ನೋಡಲು ಅಮೀರ್ ಅಭಿಮಾನಿಗಳು ಕಾತರರಾಗಿದ್ದಾರೆ. ಆದ್ರೆ ಪಾಕಿಸ್ತಾನಿ ಅಭಿಮಾನಿಗಳಿಗೆ ಮಾತ್ರ ‘ದಂಗಲ್’ ನೋಡುವ ಭಾಗ್ಯ ಸಿಗ್ತಾ ಇಲ್ಲ. ಪಾಕಿಸ್ತಾನದಲ್ಲಿ ‘ದಂಗಲ್’ ತೆರೆ ಕಾಣುವುದಿಲ್ಲ.

ಪಾಕಿಸ್ತಾನದಲ್ಲಿ ಎರಡು ತಿಂಗಳ ನಂತ್ರ ಬಾಲಿವುಡ್ ಚಿತ್ರ ಪ್ರದರ್ಶನ ಶುರುವಾಗಿದೆ. ಉರಿ ದಾಳಿ ನಂತ್ರ ಭಾರತ-ಪಾಕಿಸ್ತಾನ ಸಂಬಂಧ ಹಳಸಿದ್ದು, ಚಿತ್ರ ಪ್ರದರ್ಶನ ಮಾಡದಂತೆ ಪಾಕಿಸ್ತಾನಿ ಥಿಯೇಟರ್ ಮಾಲೀಕರು ನಿರ್ಧಾರ ಕೈಗೊಂಡಿದ್ದರು. ಆದ್ರೆ ಬಾಲಿವುಡ್ ಚಿತ್ರ ಪ್ರದರ್ಶನವಿಲ್ಲದೆ ಥಿಯೇಟರ್ ಗಳು ನಷ್ಟ ಅನುಭವಿಸಿದ್ದವು. 100ಕ್ಕೂ ಹೆಚ್ಚು ಮಂದಿ ಕೆಲಸ ಕಳೆದುಕೊಂಡಿದ್ದರು.

ನಷ್ಟದ ಕಾರಣ ಥಿಯೇಟರ್ ಮಾಲೀಕರು ಮತ್ತೆ ಚಿತ್ರ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಪಾಕಿಸ್ತಾನದಲ್ಲಿ ಅಮೀರ್ ಅಭಿಮಾನಿಗಳ ಸಂಖ್ಯೆ ಜಾಸ್ತಿ ಇದ್ದು, ಅಲ್ಲಿ ಕೂಡ ‘ದಂಗಲ್’ ಚಿತ್ರ ಬಿಡುಗಡೆಗೊಳ್ಳಲಿದೆ ಎನ್ನಲಾಗ್ತಾ ಇತ್ತು. ಆದ್ರೆ ಚಿತ್ರ ವಿತರಕರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಪಾಕಿಸ್ತಾನದಲ್ಲಿ ‘ದಂಗಲ್’ ಚಿತ್ರ ಪ್ರದರ್ಶನಗೊಳ್ಳುವುದಿಲ್ಲ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...