alex Certify
ಕನ್ನಡ ದುನಿಯಾ       Mobile App
       

Kannada Duniya

ಆಕ್ಸ್ ಫರ್ಡ್ ಡಿಕ್ಷನರಿಯ ವರ್ಷದ ಪ್ರಥಮ ಹಿಂದಿ ಪದವಾಗಿ ‘ಆಧಾರ್’

ಆಕ್ಸ್ ಫರ್ಡ್ ಡಿಕ್ಷನರಿಯಲ್ಲಿ ಈಗಾಗಲೇ ಹಲವು ಭಾರತೀಯ ಪದಗಳು ಸೇರ್ಪಡೆಗೊಂಡಿದ್ದು, ಈಗ ಭಾರತೀಯರ ದೈನಂದಿನ ಜೀವನದ ಒಂದು ಭಾಗವಾಗಿರುವ ‘ಆಧಾರ್’ ನ್ನು 2017 ರ ಪ್ರಥಮ ಹಿಂದಿ ಪದವಾಗಿ ಆಯ್ಕೆ ಮಾಡಲಾಗಿದೆ.

ರಾಜಸ್ಥಾನದ ಜೈಪುರದಲ್ಲಿ ನಡೆದ ಸಾಹಿತ್ಯ ಹಬ್ಬದ ಸಮಾರಂಭದಲ್ಲಿ ಈ ಘೋಷಣೆ ಮಾಡಲಾಗಿದ್ದು, ಖ್ಯಾತ ಹಿಂದಿ ಕವಿ ಅಶೋಕ್ ಭಾಜಪೇಯಿ, ವಿಮರ್ಶಕ ಪಂಕಜ್ ದುಬೆ, ನಿರ್ದೇಶಕ ಅನು ಸಿಂಗ್ ಚೌಧರಿ, ಚಿತ್ರಾ ಮುದ್ಗಲ್ ಮೊದಲಾದವರಿದ್ದ ತಂಡದ ಚರ್ಚೆ ಬಳಿಕ ‘ಆಧಾರ್’ ನ್ನು ಆಯ್ಕೆ ಮಾಡಲಾಗಿದೆ.

ಭಾರತ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ನೀಡುವ ‘ಆಧಾರ್’ ನ್ನು ಬಹುತೇಕ ಸರ್ಕಾರಿ ಹಾಗೂ ಖಾಸಗಿ ಸೇವೆಗಳನ್ನು ಪಡೆಯಲು ನೋಂದಣಿ ಮಾಡುವುದು ಕಡ್ಡಾಯವಾಗಿದ್ದು, ಕಡ್ಡಾಯಗೊಳಿಸಿರುವುದರ ವಿರುದ್ದ ಕೆಲವರು ಕೋರ್ಟ್ ಮೆಟ್ಟಿಲೇರಿರುವ ಕಾರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇದರ ಮಧ್ಯೆ ಆಕ್ಸ್ ಫರ್ಡ್ ವರ್ಷದ ಹಿಂದಿ ಪದವಾಗಿ ‘ಆಧಾರ್’ ಆಯ್ಕೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...