alex Certify
ಕನ್ನಡ ದುನಿಯಾ       Mobile App
       

Kannada Duniya

ಹಣ ಮಾಡುವ ಗುಂಗಿನಲ್ಲಿ ಈ ಸುಂದರ ಹುಡುಗಿ ಮಾಡಿದ ಕೆಲಸ ನೋಡಿ…!

ಹಣ ಗಳಿಸಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಆದ್ರೆ ಈ ಸುಂದರ ಮಹಿಳೆ ಹಣ ಗಳಿಸಲು ಮಾಡಿದ ಕೆಲಸ ದಂಗಾಗಿಸುವಂತಿದೆ. ಯೂಟ್ಯೂಬ್ ಚಾನೆಲ್ ಮೂಲಕ ಕೋಟ್ಯಾಂತರ ರೂಪಾಯಿ ಹಣ ಗಳಿಸುವ ಆಸೆ ಹೊಂದಿದ್ದ ಮಹಿಳೆ ಈಗ ಸಂಕಷ್ಟ ಎದುರಿಸುತ್ತಿದ್ದಾಳೆ.

ಕಾಂಬೋಡಿಯಾದ ಹುಡುಗಿ ಎಹ್ ಲಿನ್ ಟಚ್ ಹೆಸರಿನ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾಳೆ. ಅಪಾಯಕಾರಿ ಹಾಗೂ ಅಪರೂಪದ ಪ್ರಾಣಿಗಳನ್ನು ಕತ್ತರಿಸಿ ಬೇಯಿಸಿ ತಿನ್ನುತ್ತಿದ್ದಳು. ಅದ್ರ ವಿಡಿಯೋವನ್ನು ಯೂಟ್ಯೂಬ್ ಗೆ ಹಾಕ್ತಿದ್ದಳು. ವಿಡಿಯೋವನ್ನು ಹೆಚ್ಚು ಜನರು ಇಷ್ಟಪಡ್ತಿದ್ದರು. ಗಳಿಕೆ ಹೆಚ್ಚಾಗ್ತಿದ್ದಂತೆ ಮಹಿಳೆ ಆಲೋಚನೆ ಬದಲಾಗಿತ್ತು.

ಮತ್ತಷ್ಟು, ಹೆಚ್ಚು ಹೆಚ್ಚು ಹಣ ಗಳಿಸುವ ಆಸೆಗೆ ಮಹಿಳೆ ಸಂರಕ್ಷಿತ ಬೆಕ್ಕನ್ನು ಕೊಂದು ತಿಂದಿದ್ದಾಳೆ. ಆರಂಭದಲ್ಲಿ ತನ್ನ ಪತಿ ಜೊತೆ ಸೇರಿ ವಿಡಿಯೋ ಅಪ್ಲೋಡ್ ಮಾಡಿದ ಮಹಿಳೆ ಹಾವು, ಕಪ್ಪೆ, ಕಾಡು ಹಕ್ಕಿ ಹಾಗೂ ಸಮುದ್ರ ಜೀವಿಗಳನ್ನು ಬೇಯಿಸಿ ತಿನ್ನುತ್ತಿದ್ದಳು. ನಂತ್ರ ಸಂರಕ್ಷಿತ ಪ್ರಾಣಿ, ಪಕ್ಷಿಗಳನ್ನು ಮಹಿಳೆ ತಿನ್ನಲು ಶುರು ಮಾಡಿದ್ದಳು. ಕಿಂಗ್ ಕೋಬ್ರಾ, ಹೆರಾನ್ ಪಕ್ಷಿಯನ್ನೂ ಮಹಿಳೆ ತಿಂದಿದ್ದಾಳೆ.

ಮಹಿಳೆ ವಿರುದ್ಧ ದೇಶದ ಪರಿಸರ ಸಚಿವಾಲಯ ಕ್ರಿಮಿನಲ್ ಕೇಸ್ ದಾಖಲಿಸಿದೆ. ಮಹಿಳೆ ಹಾಗೂ ಆಕೆ ಪತಿಯನ್ನು ಕಾಡಿನಲ್ಲಿ ಬಂಧಿಸಲಾಗಿದೆ. ಸಿಕ್ಕಿಬಿದ್ದ ಮಹಿಳೆ ತಪ್ಪೊಪ್ಪಿಕೊಳ್ಳಲು ಸಿದ್ಧವಿಲ್ಲ. ಸಂರಕ್ಷಿತ ಪ್ರಾಣಿಗಳನ್ನು ಬೇಟೆಯಾಡಿಲ್ಲ. ಖರೀದಿ ಮಾಡಿದ್ದೇವೆ ಎಂದಿದ್ದಾಳೆ. ವಿಚಾರಣೆ ನಂತ್ರ ಸತ್ಯ ಹೊರಬರಬೇಕಿದೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...