alex Certify
ಕನ್ನಡ ದುನಿಯಾ       Mobile App
       

Kannada Duniya

ಡಯಾಲಿಸಿಸ್ ಗೆ ಹೇಳಿ ಗುಡ್ ಬೈ

kidney

ವಾಷಿಂಗ್ಟನ್: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರಿಗೆ ಡಯಾಲಿಸಿಸ್ ಅನಿವಾರ್ಯವಾಗಿದ್ದು, ಇದರಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದವರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಇನ್ನು ಮುಂದೆ ಅಂತವರು ಡಯಾಲಿಸಿಸ್ ಗಾಗಿ ಆಸ್ಪತ್ರೆಗಳಿಗೆ ಅಲೆದಾಡುವಂತಿಲ್ಲ.

ಅಮೆರಿಕದ ಡಾ.ವಿಕ್ಟರ್ ಗುರಾ ನೇತೃತ್ವದ ಸಂಶೋಧಕರ ತಂಡ ಯೂನಿವರ್ಸಿಟಿ ಆಫ್ ವಾಷಿಂಗ್ಟನ್ ಮೆಡಿಕಲ್ ಸೆಂಟರ್ ನಲ್ಲಿ 7 ಮಂದಿ ಕಿಡ್ನಿ ವೈಫಲ್ಯಕ್ಕೆ ಒಳಗಾದ ರೋಗಿಗಳ ಮೇಲೆ ಪ್ರಯೋಗ ನಡೆಸಿದ್ದು, ಯಶಸ್ವಿಯಾಗಿದೆ. ದೇಹದ ಹೊರಭಾಗದಲ್ಲಿ ಧರಿಸಬಹುದಾದ ಕೃತಕ ಕಿಡ್ನಿ ಇದಾಗಿದ್ದು, ತಮ್ಮ ದೈನಂದಿನ ಚಟುವಟಿಕೆಗಳ ಜೊತೆಯಲ್ಲಿಯೇ, ಡಯಾಲಿಸಿಸ್ ಗೆ ಒಳಗಾಗಬಹುದಾಗಿದೆ. ಸಾಮಾನ್ಯ ವಿಧಾನಕ್ಕಿಂತ ಇದು ಪರಿಣಾಮಕಾರಿಯಾಗಿದೆ ಎನ್ನಲಾಗಿದೆ.

ಕಿಡ್ನಿ ವೈಫಲ್ಯದ ಕಾರಣ ರೋಗಿಗಳು ಡಯಾಲಿಸಿಸ್ ಮಾಡಿಸಿಕೊಳ್ಳಬೇಕು. ಇದಕ್ಕಾಗಿ ಆಸ್ಪತ್ರೆಗಳಿಗೆ ಎಡತಾಕಬೇಕು. ಈ ಕೃತಕ ಸಾಧನ ಬಳಸಿದಲ್ಲಿ ಸಾಂಪ್ರದಾಯಿಕ ಡಯಾಲಿಸಿಸ್ ಯಂತ್ರಕ್ಕಿಂತ ಬೇಗನೆ ರಕ್ತವನ್ನು ಶುದ್ಧೀಕರಿಸುತ್ತದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...