alex Certify
ಕನ್ನಡ ದುನಿಯಾ       Mobile App
       

Kannada Duniya

ಬೀಜಿಂಗ್ ವಿಶ್ವವಿದ್ಯಾಲಯದಲ್ಲಿ ತಮಿಳು ಪಾಠ…!

ಚೀನಾ ರಾಜಧಾನಿ ಬೀಜಿಂಗ್ ನಲ್ಲಿರುವ ವಿಶ್ವವಿದ್ಯಾಲಯ ಇದೇ ಮೊದಲ ಬಾರಿಗೆ ತಮಿಳು ಭಾಷೆಯನ್ನು ಕಲಿಸಲು ನಾಲ್ಕು ವರ್ಷದ ನೂತನ ಕೋರ್ಸ್ ಒಂದನ್ನು ಆರಂಭಿಸಿದೆ.

ಬೀಜಿಂಗ್ ಫಾರಿನ್ ಸ್ಟಡೀಸ್ ವಿವಿ, ಈ ಪ್ರಯತ್ನಕ್ಕೆ‌ ಕೈಹಾಕಿದೆ‌. ಈ ಮೂಲಕ ಚೀನಾದಲ್ಲಿ ಹಿಂದಿ,‌ ಬಂಗಾಳಿ ನಂತರ ಆರಂಭವಾಗಿರುವ ಮೂರನೇ ಭಾರತೀಯ ಭಾಷೆ ಹಾಗೂ ದಕ್ಷಿಣ ಭಾರತದ ಮೊದಲ ಭಾಷೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸದ್ಯ ಹತ್ತು ವಿದ್ಯಾರ್ಥಿಗಳು ತಮಿಳು ವಿಷಯದಲ್ಲಿ ಪದವಿ ಪಡೆಯಲು ಕೋರ್ಸ್ ಗೆ ನೊಂದಣಿಯಾಗಿದ್ದು, ಮುಂದಿನ ನಾಲ್ಕು ವರ್ಷದಲ್ಲಿ ತಮಿಳು ಭಾಷೆ, ಸಂಸ್ಕೃತಿಯನ್ನು ಅಧ್ಯಯನ ಮಾಡಲಿದ್ದು, ಇದರ ಭಾಗವಾಗಿ ಮೂರನೇ ವರ್ಷದಲ್ಲಿ ತಮಿಳುನಾಡಿಗೆ ಭೇಟಿ ನೀಡಲಿರುವ ವಿದ್ಯಾರ್ಥಿಗಳು ತಮಿಳುನಾಡಿನ ಕಲೆ, ಸಂಸ್ಕೃತಿ ಹಾಗೂ ಜೀವನ ಶೈಲಿಯನ್ನು ಅಧ್ಯಯನ ಮಾಡಲಿದ್ದಾರೆ ಎಂದು ತಮಿಳು ವಿಭಾಗದ ಮುಖ್ಯಸ್ಥೆ ಈಸ್ವರಿ ಜೋನ್ ಜಿನ್ ವಿವರಿಸಿದ್ದಾರೆ.

ಇದೇ ಸೋಮವಾರ ಆರಂಭವಾಗಿರುವ ತಮಿಳು‌ ತರಗತಿಯಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುತ್ತಿದ್ದು, ಮೊದಲ ಅಕ್ಷರದಿಂದ‌ ಕಲಿಯುತ್ತಿದ್ದಾರೆ. ಆರಂಭದಲ್ಲಿ ತಮಿಳು ಕಲಿಯುವುದು ಕಷ್ಟ ಎಂದಿರುವ ವಿದ್ಯಾರ್ಥಿಗಳು, ಮುಂದಿನ ನಾಲ್ಕು ವರ್ಷದಲ್ಲಿ ಪೂರ್ಣ ಕಲಿಯುವ ಭರವಸೆ ವ್ಯಕ್ತಪಡಿಸಿದ್ದಾರೆ.

ತಮಿಳು ಭಾಷೆಯೊಂದಿಗೆ ಸಮಾಜ ಶಾಸ್ತ್ರ, ಅರ್ಥಶಾಸ್ತ್ರ, ಕಾನೂನು ಸೇರಿದಂತೆ ಹಲವು ಭಾಷೆಗಳಿದ್ದರೂ, ತಮಿಳು ಈ ಕೋರ್ಸ್ ನ ಮುಖ್ಯ ಉದ್ದೇಶ. ಇತ್ತೀಚಿನ ದಿನದಲ್ಲಿ ಆರ್ಥಿಕವಾಗಿ‌ ಭಾರತ‌ ಸದೃಡವಾಗುತ್ತಿರುವುದರಿಂದ, ಯಾವುದೇ ಭಾರತೀಯ ಭಾಷೆಯನ್ನು ಕಲಿತರೂ ಉದ್ಯೋಗ ಅವಕಾಶವಿದೆ ಎಂದು ಈಶ್ವರಿ ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...