alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರೇಟ್ ವಾಲ್ ಆಫ್ ‘ಚೈನಾ’ ಎಲ್ಲಿದೆ ಎಂಬ ಪ್ರಶ್ನೆಗೆ ಉತ್ತರಿಸಲು ತಡಬಡಾಯಿಸಿದ್ಲು ಮಹಿಳೆ

ಗ್ರೇಟ್‌ ವಾಲ್‌ ಆಫ್‌ ಚೈನಾ ಎಲ್ಲಿದೆ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಲು ತಡಕಾಡಿದ ಮಹಿಳೆ ಇದೀಗ ಟ್ರೋಲಿಗರ ಬಾಯಿಗೆ ಸಿಲುಕಿದ್ದಾಳೆ. ಎಲ್ಲೆಡೆ ಇವಳನ್ನು ಹಾಸ್ಯ ಮಾಡುವ ವಿಡಿಯೋ, ಫೋಟೋಗಳೇ ಹರಿದಾಡುತ್ತಿವೆ.

ಟರ್ಕಿಯಲ್ಲಿ ಕೌನ್‌ ಬನೇಗಾ ಕರೋಡ್ಪತಿ ಮಾದರಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಆರ್ಥಿಕ ವಿಭಾಗದ ಪದವೀಧರೆ ಅಯ್ಹಾನ್‌, ಚೀನಾದ ಮಹಾಗೋಡೆ ಎಲ್ಲಿದೆ ಎಂಬ ಪ್ರಶ್ನೆಗೆ ತಡಬಡಾಯಿಸಿದ್ದಾಳೆ. ಅಷ್ಟೇ ಅಲ್ಲ, ತನ್ನಲ್ಲಿರುವ ಎರಡು ಲೈಫ್‌ ಲೈನ್‌ಗಳನ್ನು ಇದೊಂದೇ ಪ್ರಶ್ನೆಗೆ ಬಳಕೆ ಮಾಡಿದ್ದಾಳೆ.

ಸ್ನೇಹಿತನಿಗೆ ಅಯ್ಹಾನ್‌ ಕರೆ ಮಾಡಿದ ವೇಳೆ ಆತ, ಚೀನಾ ಎಂದು ಹೇಳಿದ್ದ. ಇದಕ್ಕೂ ಮುನ್ನ ಆಡಿಯನ್ಸ್‌ ಪೋಲ್‌ನಲ್ಲಿ ಶೇ.50 ರಷ್ಟು ಜನ ಚೀನಾವನ್ನೇ ಆಯ್ಕೆ ಮಾಡಿದ್ದರು. ಅದಾಗ್ಯೂ ಭಯದಿಂದ ಉತ್ತರಿಸಿದ್ದಾಳೆ. ಪ್ರಶ್ನೆಯಲ್ಲೇ ಉತ್ತರವಿರುವ ಸರಳ ಪ್ರಶ್ನೆಗೆ ಉತ್ತರ ಕೊಡಲು ಕಷ್ಟಪಟ್ಟ ಹಿನ್ನೆಲೆಯಲ್ಲಿ ಅಯ್ಹಾನ್‌ ಳನ್ನು ಸಾಮಾಜಿಕ ತಾಣಗಳಲ್ಲಿ ಹಾಸ್ಯದ ವಸ್ತುವನ್ನಾಗಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...