alex Certify
ಕನ್ನಡ ದುನಿಯಾ       Mobile App
       

Kannada Duniya

ಅಮ್ಮನ ಮೊಬೈಲ್ ಕ್ರೇಜ್ ಗೆ 2 ವರ್ಷದ ಮಗು ಬಲಿ

child

ಚೀನಾದ ಬೀಜಿಂಗ್ ನಲ್ಲಿ ನಡೆದ ದುರಂತ ಇದು. ಅಮ್ಮನ ಮೊಬೈಲ್ ಪ್ರೀತಿಗೆ ಮಗು ಪ್ರಾಣ ಕಳೆದುಕೊಂಡಿದೆ. ತಾಯಿ ಮತ್ತು ಮಗು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ರು. ಅಮ್ಮ ಮೊಬೈಲ್ ನಲ್ಲಿ ಬ್ಯುಸಿಯಾಗಿದ್ರಿಂದ 2 ವರ್ಷದ ಪುಟಾಣಿ ಒಬ್ಬಳೇ ಮುಂದೆ ಮುಂದೆ ನಡೆಯುತ್ತಿದ್ಲು. ತಾಯಿ ಮೊಬೈಲ್ ನೋಡೋದ್ರಲ್ಲಿ ಅದೆಷ್ಟು ತಲ್ಲೀನಳಾಗಿದ್ದಳೆಂದ್ರೆ ಮಗಳು ತನ್ನ ಜೊತೆಗಿಲ್ಲ ಅನ್ನೋದೂ ಅರಿವಿಗೆ ಬರಲಿಲ್ಲ.

ಅಷ್ಟೊತ್ತಿಗೆ ಅಲ್ಲೇ ನಿಲ್ಲಿಸಿದ್ದ ಕಾರು ಹೊರಟುಬಿಟ್ಟಿದೆ, ಮಗು ಅಡ್ಡಬಂದಿದ್ದನ್ನು ಚಾಲಕ ಗಮನಿಸಿಲ್ಲ. ಅಮ್ಮ ಮೊಬೈಲ್ ನಿಂದ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಅನಾಹುತ ನಡೆದುಹೋಗಿತ್ತು. ಮಗು ಕಾರಿನಡಿ ಸಿಕ್ಕು ಅಪ್ಪಚ್ಚಿಯಾಗಿತ್ತು.

ಈ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿದೆ. ಚೀನಾ ಮತ್ತು ಅಮೆರಿಕದಲ್ಲಿ ಸ್ಮಾರ್ಟ್ ಫೋನ್ ಕ್ರೇಜ್ ಹೆಚ್ಚುತ್ತಿದೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಚೀನಾದಲ್ಲಿ ಶೇ.92ರಷ್ಟು ಇಂಟರ್ನೆಟ್ ಬಳಕೆದಾರರು ಸ್ಮಾರ್ಟ್ ಫೋನ್ ನಲ್ಲೇ ಆನ್ ಲೈನ್ ಇರುತ್ತಾರೆ. ಕಳೆದ ತಿಂಗಳು ನಡೆದ ಈ ದುರ್ಘಟನೆಯ ಬಳಿಕ ಚೀನಾದ ಸಾಮಾಜಿಕ ತಾಣಗಳಲ್ಲಿ ಅತಿಯಾದ ಮೊಬೈಲ್ ಬಳಕೆಯ ಅಪಾಯದ ಬಗ್ಗೆ ಎಚ್ಚರಿಕೆಯ ಸಂದೇಶಗಳು ರವಾನೆಯಾಗಿವೆ. ಚೀನಾದಲ್ಲಿ ಇಂಥದ್ದೇ ಹಲವು ಘಟನೆಗಳು ನಡೆದಿರುವುದರಿಂದ ಇನ್ನಾದ್ರೂ ಸ್ಮಾರ್ಟ್ ಫೋನ್ ಬಳಕೆ ಕಡಿಮೆ ಮಾಡುವಂತೆ ವಿವಿಧ ಸಂಘ- ಸಂಸ್ಥೆಗಳು ಮನವಿ ಮಾಡಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...