alex Certify
ಕನ್ನಡ ದುನಿಯಾ       Mobile App
       

Kannada Duniya

ಟೆಕ್ಸಾಸ್ ನ ಆ ಮನೆಯಲ್ಲಿ ಹಾವುಗಳದ್ದೇ ಹಾವಳಿ

snakes_650x400_81482849268ಜಾನ್ಸನ್ ಮೆಕ್ ಫ್ಯಾಡನ್ ಅಂದು ಕಚೇರಿಯಲ್ಲಿ ಕೆಲಸದಲ್ಲಿ ಬ್ಯುಸಿಯಾಗಿದ್ದ. ಇದ್ದಕ್ಕಿದ್ದಂತೆ ಪತ್ನಿಯಿಂದ ಮೆಸೇಜ್ ಬಂದಿತ್ತು, ಅವರ ಟೆಕ್ಸಾಸ್ ಮನೆಯ ಶೌಚಾಲಯದಲ್ಲಿ ಹಾವೊಂದು ಅಡಗಿ ಕುಳಿತಿತ್ತು, ಆ ಫೋಟೋ ಕಳಿಸಿದ್ದ ಪತ್ನಿ ಏನು ಮಾಡೋದು ಅನ್ನೋ ಆತಂಕದಲ್ಲಿದ್ಲು.

ಹಾವು ನೋಡಿ ಹೆದರಿದ ಜಾನ್ಸನ್ ಅದನ್ನು ಕೊಂದುಬಿಡುವಂತೆ ಪತ್ನಿಗೆ ಸೂಚಿಸಿದ್ದ. ಮೊದಲು ಶೌಚಾಲಯದಲ್ಲಿದ್ದ ಹಾವನ್ನು ಗಮನಿಸಿದವನು ಜಾನ್ಸನ್ ನ 4 ವರ್ಷದ ಪುಟ್ಟ ಮಗ ಐಸಾಕ್. ಅಮ್ಮ ಮಗ ಸೇರಿ ಹಾವನ್ನು ಮೇಲಕ್ಕೆಳೆದು ತಂದಿದ್ರು. ಅಂತೂ ಹಾವಿನ ಕಥೆ ಮುಗೀತು ಎಂದುಕೊಂಡು ನೆಮ್ಮದಿಯಾಗಿದ್ರು.

ಆದ್ರೆ ಜಾನ್ಸನ್ ಮನಸ್ಸಿಗೆ ಸಮಾಧಾನವಿರಲಿಲ್ಲ, ಆತ ಹತ್ತಿರದಲ್ಲೇ ಇದ್ದ ಹಾವು ಹಿಡಿಯುವ ಕಂಪನಿಯ ಸಿಬ್ಬಂದಿಯನ್ನು ಕರೆತಂದಿದ್ದ. ಜಾನ್ಸನ್ ಊಹೆ ನಿಜವಾಗಿತ್ತು,  ಹಾವಾಡಿಗರು ನಡೆಸಿದ ಕಾರ್ಯಾಚರಣೆಯಲ್ಲಿ ಮನೆಯಲ್ಲಿ ಒಟ್ಟು 24 ಹಾವುಗಳು ಸಿಕ್ಕಿವೆ. ಎಲ್ಲವೂ ವಿಷಕಾರಿ ಹಾವುಗಳೇ, ಜಾನ್ಸನ್ ಮುನ್ನೆಚ್ಚರಿಕೆ ವಹಿಸಿದ್ದರಿಂದ ಭಾರೀ ಅಪಾಯವೊಂದು ತಪ್ಪಿದಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...