alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಕಿಗೆ ಮುಳುವಾಯ್ತು ‘ಅತಿಯಾದ ಸೌಂದರ್ಯ’

ಶಿಕ್ಷಕಿಯೊಬ್ಬಳಿಗೆ ಆಕೆ ಸೌಂದರ್ಯವೇ ನೌಕರಿಗೆ ಮುಳುವಾಗಿದೆ. ಶಾಲಾ ಆಡಳಿತ ಮಂಡಳಿ ಸೌಂದರ್ಯದ ಕಾರಣ ಹೇಳಿ ಶಿಕ್ಷಕಿಯನ್ನು ಕೆಲಸದಿಂದ ತೆಗೆದು ಹಾಕಿದೆ. ಫೋಟೋಗಳನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ಹಾಕೋದ್ರಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಕೆಲಸಕ್ಕೆ ಬರಬೇಡಿ ಎಂದಿದೆ.

ಈ ಘಟನೆ ನಡೆದಿರೋದು ರಷ್ಯಾದ ಯೆಕಟೇನ್ಬರ್ಗ್ ನಲ್ಲಿ. 26 ವರ್ಷದ ವಿಕ್ಟೋರಿಯಾ ಡೇಮ್ಸ್ಕಿನಾಳನ್ನು ಶಾಲಾ ಆಡಳಿತ ಮಂಡಳಿ ಕೆಲಸದಿಂದ ಕಿತ್ತು ಹಾಕಿದೆ. ವಿಕ್ಟೋರಿಯಾ ಅಗತ್ಯಕಿಂತ ಹೆಚ್ಚು ಸುಂದರವಾಗಿದ್ದಾಳೆ. ಇನ್ಸ್ಟ್ರಾಗ್ರಾಮ್ ನಲ್ಲಿ ಆಗಾಗ ಫೋಟೋ ಹಾಕ್ತಿರುತ್ತಾಳೆ. ಇದ್ರಿಂದ ಮಕ್ಕಳ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಎಂದಿದೆ ಆಡಳಿತ ಮಂಡಳಿ.

ಈ ಹಿಂದೆಯೇ ಇನ್ಸ್ಟ್ರಾಗ್ರಾಮ್ ನಲ್ಲಿ ಮಕ್ಕಳ ಮನಸ್ಸು ಕದಡುವ ಫೋಟೋ ಹಾಕದಂತೆ ಸೂಚನೆ ನೀಡಿತ್ತು. ಆದ್ರೆ ಶಿಕ್ಷಕಿ, ಆಡಳಿತ ಮಂಡಳಿ ಮಾತು ಕೇಳಿರಲಿಲ್ಲ. ಫೋಟೋ ಹಾಕೋದು ನನ್ನ ಸಂತೋಷಕ್ಕೆ. ಇದ್ರಿಂದ ಮಕ್ಕಳ ಮೇಲೆ ಯಾವುದೇ ಪ್ರಭಾವ ಬೀರಲ್ಲ ಎಂದು ವಾದಿಸಿದ್ದಳು. ವಿಕ್ಟೋರಿಯಾ ಸಮಜಾಯಿಸಿ ಕೇಳಿದ ನಂತ್ರ ಶಾಲಾ ಆಡಳಿತ ಮಂಡಳಿ ಆಕೆಯನ್ನು ಕೆಲಸದಿಂದ ತೆಗೆದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...