alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿ ವೇತನ ಬೇಕಾ..? ಹಾಗಿದ್ದರೆ ‘ಕನ್ಯತ್ವ’ ಉಳಿಸಿಕೊಳ್ಳಿ !!

rtxx5rd-e1453787486541

ಇಂದಿನ ಕಾಲದಲ್ಲಿ ವಿದ್ಯಾರ್ಥಿ ವೇತನ ಪಡೆಯಬೇಕೆಂದರೆ ಚೆನ್ನಾಗಿ ಓದಬೇಕು. ಇಲ್ಲವೇ ನಿರ್ದಿಷ್ಟ ಜಾತಿಯಲ್ಲಿ ಜನಿಸಿರಬೇಕು. ಆದರೆ ದಕ್ಷಿಣ ಆಫ್ರಿಕಾದಲ್ಲಿ ಮಾತ್ರ ವಿದ್ಯಾರ್ಥಿನಿಯರು ಈ ಹಣಕಾಸು ಸೌಲಭ್ಯ ಪಡೆಯಲು ‘ಕನ್ಯತ್ವ’ ಉಳಿಸಿಕೊಂಡಿದ್ದರೆ ಸಾಕು. ಅರೇ, ಇದೇನು ಅಚ್ಚರಿ ಅಂತೀರಾ..? ಈ ಸ್ಟೋರಿ ಓದಿ.

ಹೌದು. ದಕ್ಷಿಣ ಆಫ್ರಿಕಾದಲ್ಲಿ ಶಾಲೆ- ಕಾಲೇಜು ಮೆಟ್ಟಿಲೇರುವಾಗಲೇ ಬಾಲಕಿಯರು ಕನ್ಯತ್ವ ಕಳೆದುಕೊಂಡು ಬಿಡುತ್ತಿದ್ದು ಮಾತ್ರವಲ್ಲ 2014 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ 20 ಸಾವಿರ ಮಂದಿ ಶಾಲಾ ವಿದ್ಯಾರ್ಥಿನಿಯರು ಗರ್ಭಿಣಿಯಾಗಿದ್ದು, ಹಾಗಾಗಿ ಇದನ್ನು ತಪ್ಪಿಸಲು ಇಲ್ಲಿನ ಆಡಳಿತ ಹೊಸ ನಿರ್ಧಾರವೊಂದನ್ನು ಕೈಗೊಂಡಿದೆ.

ವಿದ್ಯಾರ್ಥಿನಿಯರು ಓದಿನ ಕಡೆಗೇ ಹೆಚ್ಚು ಗಮನ ನೀಡಬೇಕೆಂಬ ಉದ್ದೇಶದಿಂದ ಅಲ್ಲಿನ ಆಡಳಿತ ಈ ನಿರ್ಧಾರ ತೆಗೆದುಕೊಂಡಿದ್ದು, 16 ವರ್ಷದ ಒಳಗಿನ ಬಾಲಕಿಯರು ತಮ್ಮ ವಿದ್ಯಾಭ್ಯಾಸ ಮುಗಿಯುವವರೆಗೆ ಕನ್ಯತ್ವ ಕಾಪಾಡಿಕೊಂಡರೆ, ಅವರಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆಯಂತೆ.

ಅಂದ ಹಾಗೆ ಈ ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ ಸಲ್ಲಿಸುವವರು ಕನ್ಯತ್ವ ಕಳೆದುಕೊಂಡಿರಬಾರದು. ಇದಕ್ಕಾಗಿ ವೈದ್ಯಕೀಯ ಪರೀಕ್ಷೆಯನ್ನೂ ಮಾಡಲಾಗುತ್ತಿದ್ದು, ಒಟ್ಟಾರೆ ಕನ್ಯತ್ವ ಉಳಿಸಿಕೊಂಡರೆ ಉಚಿತ ಶಿಕ್ಷಣ ಪಡೆಯುವ ಅವಕಾಶನ್ನು ಪಡೆಯಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...