alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕನನ್ನು ಬೇಕೆಂತಲೇ ಬೀಳಿಸಿದ್ಲು ಗರ್ಭಿಣಿ, ಕಾರಣ ಗೊತ್ತಾ?

ಚೀನಾದಲ್ಲಿ ಗರ್ಭಣಿಯೊಬ್ಬಳು 4 ವರ್ಷದ ಪುಟ್ಟ ಬಾಲಕನನ್ನು ಬೇಕೆಂತಲೇ ಕೆಳಕ್ಕೆ ಬೀಳಿಸಿದ್ದಾಳೆ. ಆಕೆ ಈ ರೀತಿ ಮಾಡಿರೋದಕ್ಕೆ ಕಾರಣ ಏನು ಅನ್ನೋದನ್ನು ತಿಳಿದು ಎಲ್ಲರೂ ದಂಗಾಗಿ ಹೋಗಿದ್ದಾರೆ. ಈ ಘಟನೆಯ ವಿಡಿಯೋ ಈಗಾಗ್ಲೇ ಇಂಟರ್ನೆಟ್ ನಲ್ಲಿ ಹರಿದಾಡ್ತಾ ಇದೆ.

ಗರ್ಭಿಣಿ ರೆಸ್ಟೋರೆಂಟ್ ಒಂದರಲ್ಲಿ ಕುಳಿತಿದ್ಲು. ಬಾಗಿಲಿನ ಸಮೀಪದಲ್ಲೇ ಕುಳಿತು ತಿನಿಸುಗಳನ್ನು ಸವಿಯುತ್ತಿದ್ಲು. ಅದೇ ಸಮಯಕ್ಕೆ 4 ವರ್ಷದ ಬಾಲಕನೊಬ್ಬ ಒಳಗೆ ಕುಳಿತಿದ್ದ ಹೆತ್ತವರ ಬಳಿ ಚಾಪ್ ಸ್ಟಿಕ್ಸ್ ತೆಗೆದುಕೊಳ್ಳಲು ಓಡಿ ಬಂದಿದ್ದಾನೆ.

ಬಾಗಿಲಿಗೆ ಹಾಕಿದ್ದ ಪ್ಲಾಸ್ಟಿಕ್ ಕರ್ಟನ್ ಅನ್ನು ಜೋರಾಗಿ ಸರಿಸಿದ್ದಾನೆ. ಅದು ಗರ್ಭಿಣಿಯ ಮುಖಕ್ಕೆ ಬಡಿದಿದೆ. ಗರ್ಭಿಣಿ, ಬಾಲಕ ವಾಪಸ್ ಬರುವುದನ್ನೇ ಕಾಯುತ್ತಿದ್ಲು. ಆತ ಚಾಪ್ ಸ್ಟಿಕ್ಸ್ ತೆಗೆದುಕೊಂಡು ವಾಪಸ್ ತೆರಳುವಾಗ, ತನ್ನ ಕಾಲನ್ನು ದಾರಿಗೆ ಅಡ್ಡಲಾಗಿಟ್ಟು ಅವನನ್ನು ಕೆಳಕ್ಕೆ ಬೀಳಿಸಿದ್ದಾಳೆ.

ನಂತರ ಗರ್ಭಿಣಿ ಬಾಲಕನ ಹೆತ್ತವರ ಬಳಿ ಕ್ಷಮೆ ಕೇಳಿದ್ದಾಳೆ. ಆತನ ವೈದ್ಯಕೀಯ ಪರೀಕ್ಷೆಗೆ ಬೇಕಾದ ಹಣ ಕೊಡುವುದಾಗಿಯೂ ಹೇಳಿದ್ದಾಳೆ. ಪೊಲೀಸರು ಆಕೆಗೆ 158 ಡಾಲರ್ ದಂಡ ಹಾಕಿದ್ದಾರೆ. ಈ ವಿಡಿಯೋವನ್ನು 67 ಮಿಲಿಯನ್ ಜನರು ವೀಕ್ಷಿಸಿರೋದು ವಿಶೇಷ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...