alex Certify
ಕನ್ನಡ ದುನಿಯಾ       Mobile App
       

Kannada Duniya

ಮಗನನ್ನೇ ಮದುವೆಯಾದ ಮಹಿಳೆ, ಬಳಿಕ ಮಗಳೂ….

ವಿಲಕ್ಷಣ ಬೆಳವಣಿಗೆಯೊಂದರಲ್ಲಿ ಮಹಿಳೆಯೊಬ್ಬಳು ಮಗನನ್ನೇ ಮದುವೆಯಾಗಿದ್ದು, ಬಳಿಕ ಆಕೆಯ ಪುತ್ರಿಯೂ ಸಹೋದರನನ್ನು ವರಿಸಿದ್ದಾಳೆ. ಈ ಮದುವೆ ವಿಚಾರ ಕೋರ್ಟ್ ಮೆಟ್ಟಿಲೇರಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಮದುವೆಯ ಬಳಿಕ ಲೈಂಗಿಕ ಸಂಬಂಧವನ್ನೂ ಹೊಂದಿದ್ದ ಇವರಲ್ಲೀಗ ತಪ್ಪಿತಸ್ಥರೆಂಬ ಭಾವನೆ ಮೂಡಿದೆ. ಒಕ್ಲುಹಾಮಾದ ಡಂಕನ್ ಪ್ರದೇಶದ ನಿವಾಸಿಗಳಾದ ಪೆಟ್ರಿಷಿಯಾ ಮತ್ತು ಮಿಸ್ಟಿಸ್ಪಾನ್ 2016 ರ ಮಾರ್ಚ್ 26 ರಲ್ಲಿ ಮದುವೆಯಾಗಿದ್ದಾರೆ. 44 ವರ್ಷದ ಪೆಟ್ರಿಷಿಯಾ, ಮಿಸ್ಟಿ ಸ್ಟಾನ್ ತಾಯಿಯಾಗಿದ್ದಾಳೆ. ಜೈವಿಕವಾಗಿ ಇವರ ನಡುವೆ ತಾಯಿ- ಮಗನ ಸಂಬಂಧವಿದ್ದರೂ, ಮದುವೆಯಾಗಿದ್ದಾರೆ. ನಂತರದಲ್ಲಿ ಮದುವೆಯನ್ನು ರದ್ದುಪಡಿಸಿದ್ದಾರೆ. ಬಳಿಕ ಪೆಟ್ರಿಷಿಯಾ ಪುತ್ರಿಯೂ ಸಹೋದರನನ್ನು ವಿವಾಹವಾಗಿದ್ದಾಳೆ.

ಮಕ್ಕಳ ಕಲ್ಯಾಣ ಸಮಿತಿಯ ತನಿಖಾಧಿಕಾರಿ ಇವರ ಸಂಬಂಧದ ಕುರಿತಾಗಿ ತನಿಖೆ ನಡೆಸಿದಾಗ ಹಿಂದೆ ಮದುವೆಯಾಗಿ ಮೂವರು ಮಕ್ಕಳನ್ನು ಹೊಂದಿದ್ದ ಪೆಟ್ರಿಷಿಯಾ ಮಕ್ಕಳ ಪಾಲನ್ನು ಕಳೆದುಕೊಂಡಿದ್ದು, ತಂದೆ, ಅಜ್ಜನ ಕುಟುಂಬದವರು ಮಕ್ಕಳನ್ನು ನೋಡಿಕೊಂಡಿದ್ದಾರೆ. 2 ವರ್ಷಗಳ ಹಿಂದೆ ಪೆಟ್ರಿಷಿಯಾ ಮಗನೊಂದಿಗೆ ಸೇರಿದ್ದಳು ಎಂದು ತಿಳಿದು ಬಂದಿದೆ.

ಮಿಸ್ಟಿಸ್ಟಾನ್ ಜನ್ಮ ದಾಖಲೆಗಳಲ್ಲಿ ಆತನ ತಂದೆಯ ತಾಯಿಯೇ ಇವನ ತಾಯಿ ಎಂದು ಹೇಳಲಾಗಿದೆ. ಅನೇಕ ವರ್ಷಗಳಿಂದ ದೂರವಾಗಿ ಬಳಿಕ ಮಗನೊಂದಿಗೆ ಸಂಬಂಧವನ್ನು ಬೆಳೆಸಿದ ಆಕೆ ಮದುವೆಯಾಗಿದ್ದಾಳೆ. ಆಕೆಯ ಪುತ್ರಿಯೂ ಅದೇ ಹಾದಿ ಹಿಡಿದಿದ್ದಾಳೆ. ಕೊನೆಗೆ ಅವರಲ್ಲಿ ಪಶ್ಚಾತಾಪವಾಗಿ ಮದುವೆ ರದ್ದತಿಗೆ ಮನವಿ ಮಾಡಿದ್ದಾರೆ. ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆದಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...