alex Certify
ಕನ್ನಡ ದುನಿಯಾ       Mobile App
       

Kannada Duniya

ತಿಮಿಂಗಿಲವನ್ನು ರಕ್ಷಿಸಿದ್ದೇ ಯುವಕನ ಪ್ರಾಣಕ್ಕೆ ಮುಳುವಾಯ್ತು

joe-howlett-facebook_650x400_41499912416

ಕೆನಡಾದಲ್ಲಿ ನಡೆದ ದಾರುಣ ಘಟನೆ ಇದು. ತಿಮಿಂಗಿಲವನ್ನು ರಕ್ಷಿಸಿದ ಯುವಕನೇ ಅದಕ್ಕೆ ಆಹಾರವಾಗಿಬಿಟ್ಟಿದ್ದಾನೆ. ಜೋ ಹೌಲೆಟ್ ಎಂಬಾತ ತಿಮಿಂಗಿಲ ರಕ್ಷಣಾ ಸಮಿತಿಯ ಸದಸ್ಯನಾಗಿದ್ದ. ಈ ಕಾರ್ಯಾಚರಣೆ ಅವನಿಗೆ ಹೊಸದೇನೂ ಆಗಿರಲಿಲ್ಲ.

ಅದೆಷ್ಟೋ ಬಾರಿ ತನ್ನ ತಂಡದ ಜೊತೆಗೆ ತೆರಳಿ ಸಂಕಷ್ಟದಲ್ಲಿರೋ ತಿಮಿಂಗಿಲಗಳಿಗೆ ಜೋ ಮರುಜೀವ ಕೊಟ್ಟಿದ್ದಾನೆ. ಕಳೆದ ಸೋಮವಾರ ಕೂಡ ಉತ್ತರ ಅಟ್ಲಾಂಟಿಕ್ ಸಮುದ್ರದಲ್ಲಿ ಕಾರ್ಯಾಚರಣೆ ನಡೆಯುತ್ತಿತ್ತು. ಮೀನುಗಾರರ ಬಲೆಗೆ ಭಾರೀ ತಿಮಿಂಗಿಲವೊಂದು ಸಿಕ್ಕಿಬಿದ್ದಿತ್ತು.

70 ಟನ್ ತೂಕದ ದೈತ್ಯ ತಿಮಿಂಗಿಲವನ್ನು ಜೋ ಹೌಲೆಟ್ ಬಲೆಯಿಂದ ಬಿಡಿಸಿದ್ದ. ಆದ್ರೆ ಬಲೆಯಲ್ಲಿ ಸಿಕ್ಕು ಒದ್ದಾಡಿದ್ದ ತಿಮಿಂಗಿಲ ಭಯಂಕರ ಕೋಪದಲ್ಲಿತ್ತು. ತನ್ನನ್ನು ರಕ್ಷಣೆ ಮಾಡಿದ್ದಾನೆ ಅನ್ನೋ ಕರುಣೆ ಕೂಡ ಅದಕ್ಕಿರಲಿಲ್ಲ. ಬಲವಾಗಿ ತನ್ನ ಬಾಲವನ್ನು ಬೀಸಿದೆ. ಆ ರಭಸಕ್ಕೆ ಜೋ ಸಮುದ್ರಕ್ಕೆ ಬಿದ್ದಿದ್ದಾನೆ.

ನಂತರ ಜೋ ತಿಮಿಂಗಿಲಕ್ಕೆ ಆಹಾರವಾಗಿದ್ದಾನೆ ಅಂತಾನೇ ಹೇಳಲಾಗ್ತಿದೆ. ಈ ಘಟನೆ ಬಗ್ಗೆ ಅಧಿಕಾರಿಗಳು ವಿಷಾದ ವ್ಯಕ್ತಪಡಿಸಿದ್ದಾರೆ. ಜಲಚರಗಳ ರಕ್ಷಣೆಗೆ ಶ್ರಮಿಸಿದ ಜೋ ಅವುಗಳಿಂದ್ಲೇ ಪ್ರಾಣ ಕಳೆದುಕೊಂಡಿರುವುದು ನಿಜಕ್ಕೂ ದುರಂತ ಅಂತಾ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...