alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆ ಜೊತೆ ಉಪಹಾರ ಮಾಡಿ ಜೈಲು ಸೇರಿದ…!

ಸೌದಿ ಅರೇಬಿಯಾದಲ್ಲಿ ಮಹಿಳೆ ಜೊತೆ ಉಪಹಾರ ಸೇವನೆ ಮಾಡಿದ್ದು ವ್ಯಕ್ತಿಯೊಬ್ಬನಿಗೆ ದುಬಾರಿಯಾಗಿ ಪರಿಣಮಿಸಿದೆ. ಈಜಿಪ್ಟ್ ನಿವಾಸಿ, ಮಹಿಳೆ ಜೊತೆ ಬ್ರೇಕ್ ಫಾಸ್ಟ್ ಮಾಡ್ತಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕ್ತಿದ್ದಂತೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ವಿಡಿಯೋದಲ್ಲಿ ಬುರ್ಕಾ ಧರಿಸಿರುವ ಮಹಿಳೆ ಜೊತೆ ವ್ಯಕ್ತಿ ಉಪಹಾರ ಸೇವನೆ ಮಾಡ್ತಿದ್ದಾನೆ. ವಿಡಿಯೋವನ್ನು ಆತ ಫೇಸ್ಬುಕ್ ಗೆ ಅಪ್ಲೋಡ್ ಮಾಡಿದ್ದ. ಸೌದಿ ಅರಬ್ ಕಾನೂನಿನ ಪ್ರಕಾರ, ಕಚೇರಿ, ಮೆಕ್ಡೊನಾಲ್ಡ್ ಸೇರಿದಂತೆ ಯಾವುದೇ ರೆಸ್ಟೋರೆಂಟ್ ನಲ್ಲಿ ಮಹಿಳೆಯೊಬ್ಬಳೇ ಪುರುಷನ ಜೊತೆ ಇರುವಂತಿಲ್ಲ. ಇಂಥ ಸ್ಥಳಗಳಲ್ಲಿ ಮಹಿಳೆ ತಂದೆ ಅಥವಾ ಪತಿ ಜೊತೆಗೂ ಒಟ್ಟಿಗೆ ಕುಳಿತುಕೊಳ್ಳುವಂತಿಲ್ಲ. ಮಹಿಳೆ ಸಹೋದರ ಅಥವಾ ಮಗನ ಜೊತೆ ಮಾತ್ರ ಕುಳಿತುಕೊಳ್ಳಬಹುದು.

ಸೌದಿ ಸಾಮಾಜಿಕ ಅಭಿವೃದ್ಧಿ ಸಚಿವಾಲಯ ವ್ಯಕ್ತಿಯನ್ನು ಬಂಧಿಸಿದೆ. ವ್ಯಕ್ತಿ ಸೌದಿ ಕಾನೂನು ಉಲ್ಲಂಘನೆ ಮಾಡಿದ್ದಲ್ಲದೆ ಅದ್ರ ಪ್ರಚಾರ ಮಾಡಿದ್ದಾನೆಂದು ದೂರಿದೆ. ಸೌದಿ ಜೊತೆ ಈಜಿಪ್ಟ್ ವ್ಯಕ್ತಿ ಉಪಹಾರ ಎಂಬ ವಿಡಿಯೋ ಟ್ವೀಟರ್ ನಲ್ಲಿ ಹರಿದಾಡ್ತಿದೆ. 113,000 ಬಾರಿ ಈ ವಿಡಿಯೋವನ್ನು ವೀಕ್ಷಣೆ ಮಾಡಲಾಗಿದೆ. ಅನೇಕರು ಮಹಿಳೆ ಬಂಧನಕ್ಕೆ ಆಗ್ರಹ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...