alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ತನ ಕ್ಯಾನ್ಸರ್ ರೋಗಿ ಸಾಯುವ ಮುನ್ನ ಆಸ್ಪತ್ರೆಯಲ್ಲಿ ನಡೀತು ಮದುವೆ

ಅಮೆರಿಕಾ ಕನೆಕ್ಟಿಕಟ್ ನ ವಧುವೊಬ್ಬಳ ಫೋಟೋದಲ್ಲಿ ವಿಶೇಷತೆ ಏನೂ ಕಾಣದಿರಬಹುದು. ಆದ್ರೆ ಆಕೆ ಕಥೆ ಕೇಳಿದ್ರೆ ಕಣ್ಣಲ್ಲಿ ನೀರು ಬರದೆ ಇರದು. ಆಸ್ಪತ್ರೆ ಬೆಡ್ ಮೇಲೆ ಖುಷಿಯಾಗಿ ಮದುವೆಯಾದ ಈ ವಧು ಈಗ ಈ ಜಗತ್ತಿನಲ್ಲಿಲ್ಲ. ಸಾವಿಗೆ 18 ಗಂಟೆ ಮೊದಲು ಈಕೆ ವಧುವಾಗಿದ್ದಳು ಎನ್ನುವ ವಿಷ್ಯ ಕೇಳಿದ್ರೆ ಆಶ್ಚರ್ಯವಾಗದೆ ಇರದು.

ಹೀದರ್ ಮೋಸರ್ ಹೆಸರಿನ ಈ ಹುಡುಗಿ 2015ರಲ್ಲಿ ಹೀದರ್ ಡೇವಿಡ್ ನನ್ನು ಭೇಟಿಯಾಗಿದ್ದಳು. ನಂತ್ರ ಇಬ್ಬರೂ ಪ್ರೀತಿಸಲು ಶುರುಮಾಡಿದ್ದರು. ಮುಂದಿನ ಜೀವನದ ಬಗ್ಗೆ ಕನಸು ಕಾಣಲು ಶುರು ಮಾಡಿದ್ದರು. ಆದ್ರೆ 2016, ಡಿಸೆಂಬರ್ 23 ಅವ್ರ ಜೀವನದಲ್ಲಿ ಕೆಟ್ಟ ದಿನವಾಗಿತ್ತು. ಆ ದಿನ ಹೇದಿರ್ ಮೋಸರ್ ಗೆ ಸ್ತನ ಕ್ಯಾನ್ಸರ್ ಇದೆ ಎಂಬ ಸಂಗತಿ ಗೊತ್ತಾಯ್ತು.

ಮೋಸರ್ ನನ್ನು ತುಂಬಾ ಪ್ರೀತಿ ಮಾಡ್ತಿದ್ದ ಡೇವಿಡ್ ಆಕೆ ಕೈ ಹಿಡಿಯಲು ನಿರ್ಧರಿಸಿದ್ದ. ಡಿಸೆಂಬರ್ 30, 2017ರಂದು ಮೋಸರ್ ಳನ್ನು ಮದುವೆಯಾಗುವ ತೀರ್ಮಾನ ಕೈಗೊಂಡಿದ್ದ. ಆದ್ರೆ ದಿನ ದಿನಕ್ಕೂ ಮೋಸರ್ ಪರಿಸ್ಥಿತಿ ಹದಗೆಡುತ್ತಿತ್ತು. ಹಾಗಾಗಿ ಆದಷ್ಟು ಬೇಗ ಮದುವೆಯಾಗುವಂತೆ ವೈದ್ಯರು ಸಲಹೆ ನೀಡಿದ್ದರು. ವೈದ್ಯರ ಸಲಹೆ ಮೇರೆಗೆ ಡಿಸೆಂಬರ್ 22ರಂದು ಡೇವಿಡ್ ಆಸ್ಪತ್ರೆಯಲ್ಲಿ ಸರಳ ಸಮಾರಂಭದಲ್ಲಿ ಮೋಸರ್ ಕೈ ಹಿಡಿದಿದ್ದ. ಆದ್ರೆ ಮೋಸರ್ ಮದುವೆ ವೇಳೆ ಮಾಡಿದ ಪ್ರಮಾಣವೇ ಆಕೆ ಕೊನೆ ಮಾತಾಗಿತ್ತು. ಮದುವೆಯಾದ 18 ಗಂಟೆಯಲ್ಲಿ ಮೋಸರ್ ಸಾವನ್ನಪ್ಪಿದ್ಲು. ಮೋಸರ್ ನೆನಪಿನಲ್ಲಿ ಮುಂದಿನ ಜೀವನ ಕಳೆಯಲು ಮುಂದಾಗಿದ್ದಾನೆ ಡೇವಿಡ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...