alex Certify
ಕನ್ನಡ ದುನಿಯಾ       Mobile App
       

Kannada Duniya

ಎದ್ದೇಳಲಿಲ್ಲವೆಂದು ಕಲ್ಲಿನಿಂದ ಕೊಡೆದು ಕೊಂದರು…!

ಪ್ರಾಣಿ ಸಂಗ್ರಹಾಲಯದಲ್ಲಿದ್ದ ಕಾಂಗರೂವೊಂದನ್ನು ಅಲ್ಲಿಗೆ ಬಂದಿದ್ದ ಸಂದರ್ಶಕರು ಹೊಡೆದು ಸಾಯಿಸಿರುವ ಘಟನೆ ಚೀನಾದಲ್ಲಿ ನಡೆದಿದೆ.

ದಕ್ಷಿಣ ಚೀನಾದ ಫುಜ್ಹು ಎಂಬ ಪ್ರಾಣಿ ಸಂಗ್ರಹಾಲಯದಲ್ಲಿದ್ದ 12 ವರ್ಷದ ಹೆಣ್ಣು ಕಾಂಗರೂ ನಿದ್ರಿಸುತ್ತಿತ್ತು. ಆದರೆ ಅಲ್ಲಿಗೆ ಬಂದ ಪ್ರವಾಸಿಗರು ಕಾಂಗರೂವನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ ಅದು ಏಳದೇ ಹೋದಾಗ ಕಲ್ಲು ಹಾಗೂ ಗಟ್ಟಿ ವಸ್ತುಗಳಿಂದ ಹೊಡೆದಿದ್ದಾರೆ. ಎಷ್ಟರ ಮಟ್ಟಿಗೆ ಅಂದರೆ ಅದು ಸಾಯೋ ತನಕ.

ಈ ಮಧ್ಯೆ ಝೂ ಸಿಬ್ಬಂದಿ ಅವರನ್ನು ತಡೆದರೂ ಅಷ್ಟರೊಳಗಾಗಲೇ ತಡವಾಗಿತ್ತು. ಕಾಂಗರೂ ಕಿಡ್ನಿಗಳಿಗೂ ಸಹ ತೀವ್ರವಾಗಿ ಗಾಯವಾಗಿತ್ತು. ಪಾಪದ ಕಾಂಗರೂ ಸ್ವಲ್ಪ ಹೊತ್ತಿನಲ್ಲೇ ಅಸುನೀಗಿತ್ತು. ಇದರಿಂದ ಎಚ್ಚೆತ್ತಿರುವ ಪ್ರಾಣಿಸಂಗ್ರಹಾಲಯದ ಅಧಿಕಾರಿಗಳು ಈಗ ಎಲ್ಲೆಡೆ ಕ್ಯಾಮರಾ ಇಡಲು ನಿರ್ಧರಿಸಿದ್ದು, ಹೆಚ್ಚಿನ ಭದ್ರತೆ ಒದಗಿಸಲು ತೀರ್ಮಾನಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...