alex Certify
ಕನ್ನಡ ದುನಿಯಾ       Mobile App
       

Kannada Duniya

ಶೂಟೌಟ್ ನಲ್ಲಿ ಬಚಾವ್ ಆದ್ರೂ ದಂಪತಿಯನ್ನು ಬಿಡಲಿಲ್ಲ ಸಾವು

ಅಕ್ಟೋಬರ್ 1ರಂದು ಲಾಸ್ ವೇಗಾಸ್ ನಲ್ಲಿ ನಡೆದ ಕಾನ್ಸರ್ಟ್ ನಲ್ಲಿ ಭಯಾನಕ ಶೂಟೌಟ್ ನಡೆದಿತ್ತು. ಅದೃಷ್ಟವಶಾತ್ ಈ ಗುಂಡಿನ ದಾಳಿಯಲ್ಲಿ ಲೊರೈನ್ ಕಾರ್ವರ್ ಮತ್ತವಳ ಪತಿ ಡೆನಿಸ್ ಬದುಕಿ ಬಂದಿದ್ದರು. ಈ ದಂಪತಿ ರೂಟ್ 91 ಹಾರ್ವೆಸ್ಟ್ ಫೆಸ್ಟಿವಲ್ ನಲ್ಲಿ ಎಂಜಾಯ್ ಮಾಡುತ್ತಿದ್ರು.

ಅದೇ ಸಮಯದಲ್ಲಿ ಗುಂಡಿನ ದಾಳಿ ನಡೆದಿತ್ತು. ಹೇಗೋ ತಪ್ಪಿಸಿಕೊಂಡು ಇಬ್ಬರೂ ಅಲ್ಲಿಂದ ಓಡಿ ಬಂದಿದ್ದರು. ಆದ್ರೆ ಸಾವು ಮಾತ್ರ ಅವರ ಬೆನ್ನು ಬಿಡಲೇ ಇಲ್ಲ. ಈ ಘಟನೆ ನಡೆದ ಮೇಲೆ ದಂಪತಿ ಬದುಕಿದ್ದು ಕೇವಲ 2 ವಾರ ಮಾತ್ರ. ಕ್ಯಾಲಿಫೋರ್ನಿಯಾ ಹೈವೇಯಲ್ಲಿ ನಡೆದ ಅಪಘಾತದಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ.

ಡೆನಿಸ್ ಹಾಗೂ ಲೊರೈನ್ ಪ್ರಯಾಣಿಸ್ತಾ ಇದ್ದ ಕಾರು ಅಪಘಾತಕ್ಕೀಡಾಗಿದೆ. ರಸ್ತೆ ಪಕ್ಕದಲ್ಲಿದ್ದ ಮೆಟಲ್ ಇಂಟರ್ ಕಾಮ್ ಸ್ಪೀಕರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ನಂತರ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಈ ಅಪಘಾತದಲ್ಲಿ ಡೆನಿಸ್ ಮತ್ತು ಲಾರೆನ್ ಇಬ್ಬರೂ ಸಾವನ್ನಪ್ಪಿದ್ದಾರೆ. ಅಕ್ಟೋಬರ್ 16ರಂದು ಈ ದುರಂತ ಸಂಭವಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...