alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿ ಪಡೆಯಲು ಈಕೆ ಮಾಡಿದ್ಲು ಈ ಕೆಲಸ

24 ವರ್ಷದ ಮೊಲ್ಲಿ ಸ್ಮಿತ್ ಳನ್ನು ಎರಡು ವರ್ಷಗಳ ಹಿಂದೆ ಯಾರೂ ಕಣ್ಣೆತ್ತಿ ನೋಡ್ತಿರಲಿಲ್ಲ. ಆಕೆ ತೂಕವೇ ಆಕೆಗೆ ಶತ್ರುವಾಗಿತ್ತು. 108 ಕೆ.ಜಿ. ಯಿದ್ದ ಮೊಲ್ಲಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಾಕುತ್ತಿದ್ದಳು. ಆದ್ರೆ ಆಕೆ ಫೋಟೋಕ್ಕೆ ಜನರು ಗೇಲಿ ಮಾಡ್ತಿದ್ದರೆ ವಿನಃ ಮೆಚ್ಚುಗೆ ಮಾತುಗಳು ಕೇಳಿ ಬರ್ತಿರಲಿಲ್ಲ. ಎರಡು ವರ್ಷಗಳ ಹಿಂದೆ ಮೊಲ್ಲಿಗೆ ಯುವಕನೊಬ್ಬನ ಮೇಲೆ ಪ್ರೀತಿ ಶುರುವಾಗಿದೆ. ಅಲ್ಲಿಂದ ಆಕೆ ಜೀವನ ಸಂಪೂರ್ಣ ಬದಲಾಯ್ತು.

ಮೊಲ್ಲಿ ಕಾಲೇಜಿನ ವಿದ್ಯಾರ್ಥಿಯೊಬ್ಬನನ್ನು ಪ್ರೀತಿ ಮಾಡಲು ಶುರುಮಾಡಿದ್ದಾಳೆ. ಆದ್ರೆ ತಾನು ದಪ್ಪಗಿದ್ದೇನೆಂಬ ಕಾರಣಕ್ಕೆ ನನ್ನನ್ನು ಆತ ಒಪ್ಪಿಕೊಳ್ಳುವುದಿಲ್ಲವೆಂದುಕೊಂಡ ಮೊಲ್ಲಿ ಪ್ರೀತಿಯನ್ನು ಹೇಳಲಿಲ್ಲ. ಹಾಗೆ ತನ್ನ ತೂಕ ಇಳಿಸಿಕೊಳ್ಳುವ ದೃಢ ನಿರ್ಧಾರ ತೆಗೆದುಕೊಂಡ್ಲು.

ಸದಾ ಒಂದಲ್ಲ ಒಂದು ಆಹಾರವನ್ನು ತಿನ್ನುತ್ತಿದ್ದ ಮೊಲ್ಲಿ ಮೊದಲು ಬಾಯಿಗೆ ಬೀಗ ಹಾಕಿದ್ಲು. ನಿಯಮಿತ ಪ್ರಮಾಣದಲ್ಲಿ ಆಹಾರ ಸೇವನೆ ಶುರುಮಾಡಿದ್ಲು. ಜೊತೆಗೆ ವ್ಯಾಯಾಮ ಮಾಡಿ ತೂಕ ಇಳಿಸಿಕೊಂಡಿದ್ದಾಳೆ. ಮೊದಲು ಗೇಲಿ ಮಾಡ್ತಿದ್ದ ಜನರು ಈಗ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈಗ 67 ಕೆ.ಜಿ ತೂಕವಿರುವ ಮೊಲ್ಲಿ ಈಗ ಮಾಡೆಲ್ ನಂತೆ ಕಾಣುತ್ತಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...