alex Certify
ಕನ್ನಡ ದುನಿಯಾ       Mobile App
       

Kannada Duniya

ಅತಿಯಾಗಿ ಕೆಲಸ ಮಾಡಿದ್ದಕ್ಕೂ ಬಿತ್ತು ದಂಡ…!

ರಜಾ ದಿನಗಳಲ್ಲೂ ಕೆಲಸ ಮಾಡಿದ್ರೆ ಚೆನ್ನ ಎಂದುಕೊಳ್ಳುವ ಬಾಸ್ ಗಳೇ ಹೆಚ್ಚು. ಭಾರತದಲ್ಲಂತೂ ಅದೇ ಪರಿಸ್ಥಿತಿ ಇದೆ. ಆದ್ರೆ ಯುರೋಪಿಯನ್ ರಾಷ್ಟ್ರಗಳಲ್ಲಿ ಜನರು ತಮ್ಮ ಹಾಲಿಡೇಯನ್ನು ಚೆನ್ನಾಗಿ ಎಂಜಾಯ್ ಮಾಡ್ತಾರೆ.

ರಜಾ ತೆಗೆದುಕೊಳ್ಳದೇ ಇರೋದು ಅಲ್ಲಿ ಮಹಾಪರಾಧ. ಫ್ರಾನ್ಸ್ ನಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ವಾರಕ್ಕೊಂದು ದಿನ ರಜಾ ತೆಗೆದುಕೊಳ್ಳಲೇಬೇಕು. ಸ್ವಂತ ಉದ್ಯಮ ನಡೆಸುವವರಿಗೂ ಇದೇ ನಿಯಮ ಅನ್ವಯವಾಗುತ್ತದೆ.

ವಾರದ ರಜಾ ತೆಗೆದುಕೊಂಡಿಲ್ಲ ಅನ್ನೋ ಕಾರಣಕ್ಕೆ ಬೇಕರಿ ಮಾಲೀಕನಿಗೆ 3600 ಡಾಲರ್ ದಂಡ ವಿಧಿಸಲಾಗಿದೆ. ಸೆಡ್ರಿಕ್ ವೈವ್ರೆ ಎಂಬಾತ ಬೇಕರಿಯೊಂದನ್ನು ಇಟ್ಕೊಂಡಿದ್ದಾನೆ. ಪ್ರವಾಸಿ ತಾಣದಲ್ಲಿ ಈತನ ಮಳಿಗೆ ಇದೆ. ಬೇಸಿಗೆ ಆಗಿರೋದ್ರಿಂದ ಗ್ರಾಹಕರ ಸಂಖ್ಯೆಯೂ ಹೆಚ್ಚು.

ವಾರದ ಏಳೂ ದಿನಗಳು ಸೆಡ್ರಿಕ್ ಬೇಕರಿಯಲ್ಲಿ ಕೆಲಸ ಮಾಡ್ತಿದ್ದ. ಗ್ರಾಹಕರಿಗೆ ಬಿಸಿಬಿಸಿ ತಿನಿಸುಗಳನ್ನು ರೆಡಿ ಮಾಡೋದ್ರಲ್ಲಿ ಬ್ಯುಸಿಯಾಗಿರುತ್ತಿದ್ದ. ಆದ್ರೀಗ ಅದಕ್ಕೂ ಸರ್ಕಾರವೇ ಕಲ್ಲು ಹಾಕಿದೆ. ವಾರದಲ್ಲೊಂದು ದಿನ ಕಡ್ಡಾಯವಾಗಿ ರಜಾ ಪಡೆಯದ್ದಕ್ಕೆ ಭರ್ತಿ ದಂಡ ವಿಧಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...