alex Certify
ಕನ್ನಡ ದುನಿಯಾ       Mobile App
       

Kannada Duniya

ಮೀನುಗಾರನ ಹಾಸಿಗೆ ಅಡಿಯಲ್ಲಿತ್ತು ವಿಶ್ವದ ಅತಿ ದೊಡ್ಡ ಹವಳ

BIGGEST PEARL34 ಕೆಜಿ ತೂಕ, 1 ಅಡಿ ಅಗಲ, 2.2 ಅಡಿ ಉದ್ದವಿರುವ ಅತ್ಯಮೂಲ್ಯ ಹವಳ ಅದು. ವಿಶ್ವದ  ಅತಿ ದೊಡ್ಡ ಹವಳವನ್ನು ಇದೀಗ ಫಿಲಿಪೈನ್ಸ್ ನ ಪೋರ್ಟೋ ಪ್ರಿನ್ಸೆಸಾ ಸಿಟಿಯಲ್ಲಿ ಪ್ರದರ್ಶನಕ್ಕಿಡಲಾಗಿದೆ.

ಇಂಟ್ರೆಸ್ಟಿಂಗ್ ವಿಷಯ ಅಂದ್ರೆ ಈ ಮುತ್ತನ್ನು ಶೋಧಿಸಿದವನು ಒಬ್ಬ ಮೀನುಗಾರ, ಅದು ಕೂಡ ಪಲವನ್ ದ್ವೀಪದಲ್ಲಿ. ಈ ಹವಳದ ಮೌಲ್ಯ ಎಷ್ಟು ಅನ್ನೋದು ಮೀನುಗಾರನಿಗೆ ಗೊತ್ತಿರಲಿಲ್ಲ. ಸುಮಾರು 10 ವರ್ಷಗಳಿಂದ ಆತ, ಈ ಮುತ್ತನ್ನು ತನ್ನ ಹಾಸಿಗೆ ಅಡಿಯಲ್ಲಿಟ್ಟುಕೊಂಡಿದ್ದ. ಮೀನುಗಾರಿಕೆಗೆ ತೆರಳಿದ್ದಾಗ ಇದ್ದಕ್ಕಿದ್ದಂತೆ ಚಂಡಮಾರುತ ಶುರುವಾಯ್ತು, ಆಗ ದೋಣಿಯನ್ನು ಲಂಗರು ಹಾಕುವ ವೇಳೆ ಬೋಟ್ ಗೆ ಗಟ್ಟಿಯಾದ ವಸ್ತುವೊಂದು ತಗುಲಿತ್ತು. ನೀರಿಗಿಳಿದ ಮೀನುಗಾರ ಅದನ್ನು ಮೇಲಕ್ಕೆ ತಂದ, ಅದೇ ಈ ಅತ್ಯಮೂಲ್ಯ ಮುತ್ತು. ಈ ಹವಳದ ಮೌಲ್ಯ ಮೀನುಗಾರನಿಗೆ ಗೊತ್ತಿರಲಿಲ್ಲ.

ಆಕಸ್ಮಿಕ ಬೆಂಕಿ ಅವಘಡವೊಂದರಲ್ಲಿ ಮೀನುಗಾರನ ಮನೆ ಬೆಂಕಿಗೆ ಆಹುತಿಯಾಯ್ತು, ಈ ವೇಳೆ ಹವಳ ಪತ್ತೆಯಾಗಿದೆ. ಈ ಮುತ್ತಿನ ಮೌಲ್ಯ 100 ಮಿಲಿಯನ್ ಡಾಲರ್ ಅಂತಾ ಅಂದಾಜಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...