alex Certify
ಕನ್ನಡ ದುನಿಯಾ       Mobile App
       

Kannada Duniya

24 ವರ್ಷಗಳ ಬಳಿಕ ಹೆತ್ತವರನ್ನು ಸೇರಿದ್ದಾಳೆ ಕಾಣೆಯಾಗಿದ್ದ ಮಗಳು

ಮಗುವನ್ನು ಕಳೆದುಕೊಳ್ಳೋದಕ್ಕಿಂತ ನೋವಿನ ಸಂಗತಿ ಹೆತ್ತವರ ಪಾಲಿಗೆ ಬೇರೇನೂ ಇರಲಾರದು. ಆ ದುಃಖ, ಬೇಸರವನ್ನು ಮರೆಯೋದು ಕೂಡ ಅಸಾಧ್ಯ. ಆದ್ರೆ ಚೀನಾದ ವಾಂಗ್ ಮಿಂಗ್ ಕ್ವಿಂಗ್ ಎಂಬಾತನ ಬದುಕಿನಲ್ಲಿ ಮಾತ್ರ ಚಮತ್ಕಾರವೇ ನಡೆದಿದೆ.

ವಾಂಗ್ ಮಿಂಗ್ ಹಾಗೂ ಲಿಯು ಚೆಂಗ್ಯಿಂಗ್ ದಂಪತಿಯ ಮಗಳು ವಾಂಗ್ ಕ್ವಿಫೆಂಗ್ 3 ವರ್ಷದವಳಾಗಿದ್ದಾಗ್ಲೇ ನಾಪತ್ತೆಯಾಗಿದ್ಲು. ವಾಂಗ್ ಮಿಂಗ್ ರಸ್ತೆ ಬದಿಯಲ್ಲೇ ಹಣ್ಣಿನಂಗಡಿ ಇಟ್ಟುಕೊಂಡಿದ್ದ. ಅಲ್ಲೇ ಆಡುತ್ತಿದ್ದ ಮಗು ಕಾಣೆಯಾಗಿತ್ತು.

ಆಗಿನಿಂದ್ಲೂ ವಾಂಗ್ ಮಿಂಗ್ ಮಗಳಿಗಾಗಿ ಹುಡುಕಾಟ ನಡೆಸುತ್ತಲೇ ಇದ್ದ. ಈಗ 24 ವರ್ಷಗಳ ನಂತರ ಮಗಳನ್ನು ಪತ್ತೆ ಮಾಡಿದ್ದಾನೆ. ದಂಪತಿಗೆ ಇನ್ನೊಂದು ಮಗುವಾಗಿತ್ತು. ಆದ್ರೂ ಮೊದಲ ಮಗುವನ್ನು ಹುಡುಕುವುದು ಬಿಟ್ಟಿರಲಿಲ್ಲ.

ಸರ್ಕಾರಿ ಅಧಿಕಾರಿಗಳು ಹಾಗೂ ಚೀನಾ ವೆಬ್ ಸೈಟ್ ಗಳ ನೆರವಿನಿಂದ ವಾಂಗ್ ಕ್ವಿಫೆಂಗ್ ತನ್ನ ಹೆತ್ತವರ ಮಡಿಲು ಸೇರಿದ್ದಾಳೆ. ಅಂಗಡಿಗೆ ಬರುತ್ತಿದ್ದ ಪ್ರತಿ ಗ್ರಾಹಕರ ಬಳಿಯೂ ತನ್ನ ಮಗಳ ಬಗ್ಗೆ ಸುಳಿವು ಸಿಕ್ಕಲ್ಲಿ ತಿಳಿಸುವಂತೆ ವಾಂಗ್ ಮಿಂಗ್ ಬೇಡಿಕೊಳ್ಳುತ್ತಿದ್ದ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...