alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಅತಿಥಿಗಳೇ ಭರಿಸಬೇಕು ಮದುವೆ ವೆಚ್ಚ…!

ಮದುವೆ ಆಹ್ವಾನ ಪತ್ರಿಕೆ ಸ್ವೀಕರಿಸಿದ್ರೆ ಖರ್ಚು ಮೈಮೇಲೆ ಎಳೆದುಕೊಂಡಂತೆಯೇ ಲೆಕ್ಕ. ನವಜೋಡಿಗೆ ಉಡುಗೊರೆ, ನಮಗೆ ಹೊಸ ಬಟ್ಟೆ, ಅಲ್ಲಿ ವಸತಿ ವ್ಯವಸ್ಥೆ, ಪ್ರಯಾಣದ ಖರ್ಚು ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇದುವರೆಗೆ ಮದುವೆ ಮನೆಯಲ್ಲೂ ಹಣ ಕೊಡಬೇಕಾದ ಸ್ಥಿತಿ ಇರಲಿಲ್ಲ.

ಆದ್ರೀಗ ಲಂಡನ್ ನ ಯುವ ಜೋಡಿ ತಮ್ಮ ಮದುವೆ ಖರ್ಚನ್ನು ಭರಿಸುವಂತೆ ಅತಿಥಿಗಳ ಬಳಿಯೇ ಮನವಿ ಮಾಡಿದೆ. ಮದುವೆಗೆ ಬರೋ ಪ್ರತಿಯೊಬ್ಬರೂ ತಲಾ 150 ಪೌಂಡ್ ನೀಡಿ ಸಹಕರಿಸುವಂತೆ ಬೆನ್ ಫರೀನಾ ಹಾಗೂ ಕ್ಲೇರ್ ಮೋರನ್ ಕೇಳಿಕೊಂಡಿದ್ದಾರೆ.

ಡರ್ಬಿಶೈರ್ ನಲ್ಲಿ ಅತಿಥಿಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಸ್ವಿಮ್ಮಿಂಗ್ ಪೂಲ್, ಸ್ಪಾ, ಫುಡ್, ಡ್ರಿಂಕ್ಸ್ ಎಲ್ಲವೂ ಇದೆ. ಇದರ ಖರ್ಚನ್ನು ಯುವಜೋಡಿ ಅತಿಥಿಗಳ ಮೇಲೆ ಹಾಕ್ತಿದ್ದಾರೆ. ಅತಿಥಿಗಳು ಕೂಡ ಇದಕ್ಕೆ ಸಮ್ಮತಿಸಿದ್ದಾರಂತೆ.

ಈಗಾಗ್ಲೇ 80 ಮಂದಿ ಹಣವನ್ನು ಮುಂಗಡವಾಗಿಯೇ ಕೊಟ್ಟಿದ್ದಾರೆ. 150 ಪೌಂಡ್ ಕೊಟ್ಟು ಮೂರು ದಿನ ಆರಾಮಾಗಿ ಮದುವೆ ನೆಪದಲ್ಲಿ ರಿಲ್ಯಾಕ್ಸ್ ಮಾಡಬಹುದು. ನಿಜಕ್ಕೂ ಇದು ಒಳ್ಳೆ ಐಡಿಯಾ ಎನ್ನುತ್ತಿದ್ದಾರೆ ಕೆಲವರು. ಇನ್ನೊಂದಷ್ಟು ಮಂದಿ ಮದುವೆ ಖರ್ಚು ಭರಿಸಲಾಗದಿದ್ದ ಮೇಲೆ, ಅದ್ಧೂರಿ ಮದುವೆ ಯಾಕೆ ಅಂತಾ ಪ್ರಶ್ನಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...