alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಲಸ ಪೂರ್ಣಗೊಳಿಸದ ಸಿಬ್ಬಂದಿ ಕುಡಿಬೇಕು ಮೂತ್ರ….ತಿನ್ನಬೇಕು ಜಿರಳೆ…!

ಚೀನಾ ಕಂಪನಿಯೊಂದು ನೌಕರರ ಜೊತೆ ಕೆಟ್ಟದಾಗಿ ನಡೆದುಕೊಂಡಿದೆ. ಮಾನವೀಯತೆ ಮರೆತ ಕಂಪನಿ ಕೆಲಸ ಪೂರ್ಣಗೊಳಿಸದ ನೌಕರರಿಗೆ ಮೂತ್ರ ಸೇವನೆ ಮಾಡುವಂತೆ ಬಲವಂತ ಮಾಡಿದೆ. ಜಿರಳೆ ತಿನ್ನುವಂತೆ ಒತ್ತಡ ಹೇರಿದೆ.

ಮಾಧ್ಯಮಗಳ ವರದಿ ಪ್ರಕಾರ, ಕೆಲಸಗಾರರು ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಿಲ್ಲವಂತೆ. ಕೆಲವರು ಟಾರ್ಗೆಟ್ ಪೂರ್ಣಗೊಳಿಸಿಲ್ಲವಂತೆ. ಈ ಕಾರಣಕ್ಕೆ ನೌಕರರಿಗೆ ಬೆಲ್ಟ್ ನಲ್ಲಿ ಹೊಡೆಯುತ್ತಾರಂತೆ. ಮೂತ್ರ ಕುಡಿಯಲು ಒತ್ತಡ ಹೇರುತ್ತಾರಂತೆ. ಜೊತೆಗೆ ಜಿರಳೆ ತಿನ್ನಲು ಬಲವಂತ ಮಾಡುತ್ತಾರಂತೆ.

ಶೌಚಾಲಯದಲ್ಲಿ ಕೈ ತೊಳೆಯುವ ಮಗ್ ನಿಂದ ನೀರು ಕುಡಿಯಬೇಕಂತೆ. ಕೆಲಸ ಮಾಡದ ಸಿಬ್ಬಂದಿ ಎಲ್ಲರ ಎದುರು ಶಿಕ್ಷೆ ಅನುಭವಿಸಬೇಕಂತೆ. ಸಂಬಳ ಕೂಡ ನೀಡುವುದಿಲ್ಲವಂತೆ. ಕೆಲಸ ಬಿಟ್ಟ ಮೇಲೆ ಕೆಲ ನೌಕರರು ಕಂಪನಿ ಬಣ್ಣ ಬಯಲು ಮಾಡಿದ್ದಾರೆ. ಕಚೇರಿಗೆ ಶೂ ಹಾಗೂ ಸರಿಯಾದ ಬಟ್ಟೆ ಧರಿಸದೆ ಬರುವ ಸಿಬ್ಬಂದಿ ದಂಡ ವಿಧಿಸಬೇಕಂತೆ. ಮ್ಯಾನೇಜರ್ ವಿರುದ್ಧ ಈಗಾಗಲೇ ಅನೇಕ ದೂರು ಕೇಳಿ ಬಂದಿದ್ದು, ಮೂವರು ಮ್ಯಾನೇಜರ್ 5-10 ತಿಂಗಳು ಜೈಲಿಗೆ ಹೋಗಿ ಬಂದಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...