alex Certify
ಕನ್ನಡ ದುನಿಯಾ       Mobile App
       

Kannada Duniya

ಇದು ನೀವು ಕಂಡು ಕೇಳರಿಯದಂತಹ ಮದುವೆ ಪ್ರಪೋಸಲ್…!

ಚೆನ್ ಮಿಂಗ್ ಚೀನಾದ ವಿಡಿಯೋ ಗೇಮ್ ಡಿಸೈನರ್. ತನ್ನ ಪ್ರೇಯಸಿಗೆ ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಬೇಕು ಅಂದುಕೊಂಡಿದ್ದ. ಅದಕ್ಕಾಗಿ ಅವನು ಆಯ್ಕೆ ಮಾಡಿಕೊಂಡಿದ್ದು ಐಫೋನ್ ಎಕ್ಸ್. ಒಂದಲ್ಲ, ಎರಡಲ್ಲ ಬರೋಬ್ಬರಿ 25 ಐಫೋನ್ ಗಳು.

ಚೆನ್ ಮಿಂಗ್ 25 ಐಫೋನ್ ಎಕ್ಸ್ ಗಳನ್ನು ಬುಕ್ ಮಾಡಿದ್ದ. ನವೆಂಬರ್ 3ರಂದು ಐಫೋನ್ ಅವನ ಕೈಸೇರಿತ್ತು. ಆ ಮೊಬೈಲ್ ಗಳನ್ನೆಲ್ಲಾ ನೆಲದ ಮೇಲೆ ಹೃದಯದ ಆಕಾರದಲ್ಲಿ ವಿನ್ಯಾಸ ಮಾಡಿದ್ದ ಚೆನ್, ಅದರೊಳಕ್ಕೆ ಗುಲಾಬಿ ಪಕಳೆಗಳನ್ನಿಟ್ಟು ಅಲಂಕರಿಸಿದ.

ಕೊನೆಗೆ ತಾನು ಪ್ರೀತಿಸ್ತಾ ಇದ್ದ ಲೀ ಎಂಬ ಆ ಯುವತಿಗೆ ಪ್ರಪೋಸ್ ಮಾಡಿದ. ಈ ಶ್ರೀಮಂತ ಪ್ರಪೋಸಲ್ ಅನ್ನು ಯಾರಾದ್ರೂ ನಿರಾಕರಿಸೋದುಂಟೇ? ಲೀ ಕೂಡ ಚೆನ್ ಮಿಂಗ್ ನನ್ನು ಮದುವೆಯಾಗಲು ಒಪ್ಪಿದ್ದಾಳೆ. ಆಕೆಗೆ ಕೂಡ ಸ್ಮಾರ್ಟ್ ಫೋನ್ ಗೇಮ್ ಗಳ ಬಗ್ಗೆ ವಿಶಿಷ್ಟ ಒಲವು ಇದೆಯಂತೆ.

25 ಐಫೋನ್ ಗಳಲ್ಲಿ ಒಂದಷ್ಟು ಚೆನ್ ಮಿಂಗ್ ಮತ್ತು ಲೀ ಸ್ನೇಹಿತರ ಪಾಲಾಗಿವೆ. ಈ ಪ್ರಪೋಸಲ್ ಯಶಸ್ವಿಯಾಗಲು ಸಹಕರಿಸಿದವರಿಗೆಲ್ಲ ಚೆನ್ ಮಿಂಗ್ ಒಂದೊಂದು ಮೊಬೈಲ್ ಅನ್ನು ಫ್ರೀಯಾಗಿ ಕೊಟ್ಟಿದ್ದಾನೆ. ಒಟ್ಟು 25 ಐಫೋನ್ ಕೊಳ್ಳಲು ಚೆನ್ 20,58,600 ರೂಪಾಯಿ ಖರ್ಚು ಮಾಡಿದ್ದಾನೆ.

ಈ ಹಣದಲ್ಲಿ ಒಂದೊಳ್ಳೆ ಕಾರ್ ಗಿಫ್ಟ್ ಮಾಡಬಹುದಿತ್ತು. ಸ್ವಂತ ಮನೆ ಖರೀದಿಗೆ ಡೌನ್ ಪೇಮೆಂಟ್ ಕೂಡ ಮಾಡಲು ಸಾಧ್ಯವಿತ್ತು ಅನ್ನೋದು ಕೆಲವರ ಅಭಿಪ್ರಾಯ. ಆದ್ರೆ ಲವ್ ಅನ್ನೋದು ಬಹಳ ಸ್ಮಾರ್ಟ್ ಅಂತಾ ಎಷ್ಟೋ ಮಂದಿಗೆ ಗೊತ್ತೇ ಇಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...