alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಚಿಂಪಾಂಜಿ ಏನ್ ಕಮ್ಮಿ ಇಲ್ಲ ಬಿಡ್ರೀ..!

chimp1_14769ಉತ್ತರ ಕೊರಿಯಾದ ಪ್ರಾಣಿ ಸಂಗ್ರಹಾಲಯದಲ್ಲಿರುವ ಚಿಂಪಾಂಜಿಯೊಂದು ದಿನವೊಂದಕ್ಕೆ ಬರೋಬ್ಬರಿ 20 ಸಿಗರೇಟ್ ಹೊಡೆಯುತ್ತಿದೆ. ಇದು ವೀಕ್ಷಕರಿಗೆ ಮನರಂಜನೆಯಾದರೂ ಪ್ರಾಣಿ ಪ್ರಿಯರ ಕಣ್ಣು ಕೆಂಪಗಾಗಿಸಿದೆ.

Azalea ಎಂಬ ಹೆಸರಿನ 19 ವರ್ಷದ ಚಿಂಪಾಂಜಿಗೆ ಸಿಗರೇಟ್ ಸೇದುವ ಅಭ್ಯಾಸವನ್ನು ಅದನ್ನು ನೋಡಿಕೊಳ್ಳುತ್ತಿರುವ ಮೇಲ್ವಿಚಾರಕ ಮಾಡಿಸಿದ್ದು, ಸಿಗರೇಟ್ ಕೈಗೆ ಸಿಗುತ್ತಲೇ ಈ ಚಿಂಪಾಂಜಿ ಸ್ವತಃ ತಾನೇ ಅದನ್ನು ಲೈಟರ್ ನಿಂದ ಹಚ್ಚಿಕೊಳ್ಳುತ್ತದೆ.

ಇದು ವೀಕ್ಷಕರಿಗೆ ಮನರಂಜನೆಯನ್ನು ಒದಗಿಸುತ್ತಿದೆಯಾದರೂ ಪ್ರಾಣಿ ಪ್ರಿಯರು ಮಾತ್ರ ಈ ಕುರಿತು ಕೆಂಡ ಕಾರಿದ್ದಾರೆ. ಮನರಂಜನೆಯ ಹೆಸರಿನಲ್ಲಿ ಮುಗ್ದ ಪ್ರಾಣಿಗೆ ಕ್ರೂರ ಹಿಂಸೆ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಹಿಂದೆಯೂ ಈ ಪ್ರಾಣಿ ಸಂಗ್ರಹಾಲಯ ಇಲ್ಲಿರುವ ಪ್ರಾಣಿಗಳಿಗೆ ನೀಡಲಾಗುತ್ತಿರುವ ಕನಿಷ್ಟ ಸೌಲಭ್ಯದ ಕಾರಣಕ್ಕಾಗಿ ಸುದ್ದಿಯಾಗಿದ್ದು, ಇದೀಗ ಚಿಂಪಾಂಜಿಗೆ ಸಿಗರೇಟ್ ಸೇದುವುದನ್ನು ಕಲಿಸಿ ಮತ್ತೊಮ್ಮೆ ಪ್ರಚಾರಕ್ಕೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...