alex Certify
ಕನ್ನಡ ದುನಿಯಾ       Mobile App
       

Kannada Duniya

ಚರಂಡಿ ಪೈಪ್ ನಲ್ಲಿ ನಿರ್ಮಾಣವಾಗಿದೆ ಸುಂದರ ಮನೆ

ತಂತ್ರಜ್ಞಾನ ಬದಲಾಗ್ತಿದ್ದಂತೆ ಜನರ ಆಲೋಚನೆ ಕೂಡ ಬದಲಾಗ್ತಿದೆ. ದೊಡ್ಡ ದೊಡ್ಡ ಮನೆಗಗಳಲ್ಲಿ ವಾಸವಾಗುವ ಬದಲು ಆಕರ್ಷಕ ಮನೆಗಳಲ್ಲಿ ವಾಸ ಮಾಡಲು ಜನರು ಮನಸ್ಸು ಮಾಡ್ತಿದ್ದಾರೆ. ಈ ಮಧ್ಯೆ ಚರಂಡಿಗೆ ಬಳಸುವ ಪೈಪ್ ನಲ್ಲಿ ವ್ಯಕ್ತಿಯೊಬ್ಬ ಮನೆ ನಿರ್ಮಾಣ ಮಾಡಿದ್ದಾನೆ.

ಯಸ್, ಹಾಂಕಾಂಗ್ ನ ಜೇಮ್ಸ್ ಲಾ ಎಂಬಾತ ಪೈಪ್ ನಲ್ಲಿ ಮನೆ ನಿರ್ಮಾಣ ಮಾಡಿದ್ದಾನೆ. ಜೇಮ್ಸ್ ಸಣ್ಣದೊಂದು ಅಪಾರ್ಟ್ಮೆಂಟ್ ನಿರ್ಮಾಣ ಮಾಡಿದ್ದಾನೆ. ಅದಕ್ಕೆ ಒಪಿಒಪಿ ಟ್ಯೂಬ್ ಹೌಸ್ ಎಂದು ಹೆಸರಿಟ್ಟಿದ್ದಾನೆ. ಈ ಅಪಾರ್ಟ್ಮೆಂಟ್ ನಲ್ಲಿ ಪೈಪ್ ನಿಂದ ನಿರ್ಮಾಣವಾದ ಮನೆಗಳಿವೆ.

100 ಚದರ ಅಡಿಯಲ್ಲಿ ಈ ಅಪಾರ್ಟ್ಮೆಂಟ್ ಇದೆ. ಜನರು ಈ ಮನೆ ಬಗ್ಗೆ ಆಸಕ್ತಿ ಹೊಂದಿದ್ದಾರಂತೆ. ಮನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರಂತೆ. ಮನೆ ಖರೀದಿಗೆ ಆಲೋಚನೆ ಮಾಡುತ್ತಿದ್ದಾರೆಂದು ಜೇಮ್ಸ್ ಲಾ ಹೇಳಿದ್ದಾನೆ. ಪೈಪ್ ನ ಈ ಮನೆಯ ಎರಡೂ ಕಡೆ ಗಾಜಿನ ಬಾಗಿಲುಗಳಿವೆ. ಮನೆಯಲ್ಲಿ ಬೇಂಜ್ ಒಂದಿದ್ದು ಅದನ್ನು ಬೆಡ್ ಆಗಿ ಪರಿವರ್ತಿಸಬಹುದಾಗಿದೆ. ವಸ್ತುಗಳನ್ನಿಡಲು ಮನೆಯಲ್ಲಿ ಜಾಗವಿದೆ. ಮೈಕ್ರೋವೇವ್ ಹಾಗೂ ಏರ್ ಕಂಡಿಷನರ್ ಕೂಡ ಮನೆಯಲ್ಲಿದೆ. ಈ ಮನೆಯಲ್ಲಿ ಒಂದು ಬಾತ್ ರೂಂ ಕೂಡ ಇದೆ.

ಜೇಮ್ಸ್ ಪ್ರಕಾರ ಈ ಮನೆ ನಿರ್ಮಾಣಕ್ಕೆ 15,000 ಡಾಲರ್ ಅಂದ್ರೆ ಸುಮಾರು 9.5 ಲಕ್ಷ ರೂಪಾಯಿ ಖರ್ಚಾಗಿದೆಯಂತೆ. ಹಾಂಕಾಂಗ್ ನಂತ ದೇಶದಲ್ಲಿ ಇಷ್ಟು ಕಡಿಮೆ ಬೆಲೆಗೆ ಮನೆ ಸಿಗೋದು ಕಷ್ಟ ಎನ್ನುತ್ತಾರೆ ಜೇಮ್ಸ್.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...