alex Certify
ಕನ್ನಡ ದುನಿಯಾ       Mobile App
       

Kannada Duniya

ಅಪಾರ್ಟ್ ಮೆಂಟ್ ಗೆ ಬೆಂಕಿ ತಗುಲಿ 12 ಮಂದಿ ದಾರುಣ ಸಾವು

ನ್ಯೂಯಾರ್ಕ್ ಸಿಟಿ: ಸ್ಟವ್ ಸ್ಪೋಟದಿಂದ ಅಪಾರ್ಟ್ ಮೆಂಟ್ ಗೆ ಬೆಂಕಿ ತಗುಲಿ, 1 ವರ್ಷದ ಮಗು ಸೇರಿ 12 ಮಂದಿ ದಾರುಣವಾಗಿ ಸಾವು ಕಂಡಿದ್ದಾರೆ.

ನ್ಯೂಯಾರ್ಕ್ ಸಿಟಿಯ ಬ್ರಾಂಕ್ಸ್ ನಲ್ಲಿರುವ 5 ಅಂತಸ್ತಿನ ಕಟ್ಟಡದಲ್ಲಿ ದುರಂತ ನಡೆದಿದ್ದು, ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಲಾಗಿದೆ. 3 ವರ್ಷದ ಮಗು ಅಡುಗೆ ಮನೆಯಲ್ಲಿ ಸ್ಟವ್ ಹಚ್ಚಿದ್ದು, ಅದು ಸ್ಪೋಟಗೊಂಡಿದೆ.

ಈ ವೇಳೆ ಬಾತ್ ರೂಂನಲ್ಲಿದ್ದ ತಾಯಿ ಬಂದು ನೋಡಿದಾಗ ಬೆಂಕಿಯ ಜ್ವಾಲೆ ಹರಡಿರುವುದು ಕಂಡಿದೆ. ಕೂಡಲೇ ಮಗುವನ್ನು ಎತ್ತಿಕೊಂಡು ಅಲ್ಲಿಂದ ಹೊರಗೆ ಬಂದಿದ್ದಾಳೆ. ಆದರೆ, ಬಾಗಿಲು ಹಾಕುವುದನ್ನು ಮರೆತಿದ್ದಾಳೆ. ಇದರ ಪರಿಣಾಮ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದ್ದು, ಮಕ್ಕಳು, ವೃದ್ಧರು ಸೇರಿದಂತೆ 12 ಮಂದಿಯ ಜೀವವನ್ನು ಬಲಿ ಪಡೆದಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಕೂಡಲೇ ಕಾರ್ಯಾಚರಣೆಗೆ ಇಳಿದರೂ, ದಟ್ಟವಾದ ಹೊಗೆ ಮತ್ತು ಜ್ವಾಲೆಯಿಂದ ಹಿನ್ನಡೆಯಾಗಿದೆ. ಎಲ್ಲೆಂದರಲ್ಲಿ ಸುಟ್ಟು ಕರಕಲಾದ ಮೃತದೇಹಗಳು ಬಿದ್ದಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...