alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಕಿನಿಯಲ್ಲೇ ಕಳ್ಳನ ಬೆನ್ನಟ್ಟಿದ ಲೇಡಿ ಪೊಲೀಸ್

Sweden-Bikini-Arr

ಬೀಚ್ ನಲ್ಲಿ ಮಹಿಳೆಯೊಬ್ಬರ ಮೊಬೈಲ್ ಕಳವು ಮಾಡಿ, ಪರಾರಿಯಾಗುತ್ತಿದ್ದ ಕಳ್ಳನನ್ನು ಆಕೆಯ ಸ್ನೇಹಿತೆ ಬೆನ್ನಟ್ಟಿ ಹಿಡಿದ ಘಟನೆ ಸ್ವೀಡನ್ ನಲ್ಲಿ ನಡೆದಿದೆ. ಮೊಬೈಲ್ ಕದ್ದ ಕಳ್ಳನನ್ನು ಈ ಮಹಿಳೆಯರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೈಕೆಲಾ ಕೆಲ್ನರ್ ಎಂಬ ಮಹಿಳಾ ಪೊಲೀಸ್ ಕಳ್ಳನನ್ನು ಹಿಡಿದವರು. ಅಂದ ಹಾಗೇ ಮೈಕೆಲಾ ಕೆಲ್ನರ್ 11 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಯಾಗಿದ್ದು, ಪವರ್ ಲಿಫ್ಟಿಂಗ್ ನಲ್ಲಿ ಆಸಕ್ತಿ ಹೊಂದಿರುವ ಅವರು, ಖಾಸಗಿ ವಾಹಿನಿಯೊಂದರಲ್ಲಿ ಶೋ ಒಂದನ್ನು ನಡೆಸಿಕೊಡುತ್ತಾರೆ. ಮೈಕೆಲಾ ಕೆಲ್ನರ್ ತಮ್ಮ ಗೆಳತಿಯರೊಂದಿಗೆ ಬೀಚ್ ಗೆ ತೆರಳಿದ್ದು, ಬಿಕಿನಿ ತೊಟ್ಟು ಈಜಾಡುತ್ತಿದ್ದರು. ಇವರೆಲ್ಲಾ ನೀರಿನಲ್ಲಿ ಇದ್ದ ಸಂದರ್ಭದಲ್ಲಿ ಗೆಳತಿಯ ಮೊಬೈಲ್ ಅನ್ನು ಕಳ್ಳನೊಬ್ಬ ಎಗರಿಸಿ ಓಡುತ್ತಿರುವುದು ಕಂಡಿದೆ.

ಬಿಕಿನಿಯಲ್ಲೇ ಕಳ್ಳನನ್ನು ಬೆನ್ನಟ್ಟಿ ಹಿಡಿದ ಮೈಕೆಲಾ ಮತ್ತು ಆಕೆಯ ಗೆಳತಿಯರು, ಕಳ್ಳನನ್ನು ಥಳಿಸಿ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಮೈಕೆಲಾ ಸಾಹಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಹಸಿ ಮಹಿಳೆ ಎಂದು ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...