alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶೇಷ ಸಮಯದಲ್ಲಿ ಜನಿಸಿದ್ಲು ಈ ಬಾಲೆ…!

ಮಗು ಹುಟ್ಟಿದ ದಿನಾಂಕ, ಸಮಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಜನವರಿ 1ರಂದು ಮಧ್ಯರಾತ್ರಿ 12 ಗಂಟೆಗೆ ಮಗು ಜನಿಸಬೇಕೆನ್ನುವವರು ಅನೇಕರಿದ್ದಾರೆ. ಇದೇ ಕಾರಣಕ್ಕೆ ಡಿಸೆಂಬರ್ 31 ರ ರಾತ್ರಿ 11 ಗಂಟೆಗಾಗುವ ಹೆರಿಗೆಯನ್ನು ಒಂದು ಗಂಟೆ ಮುಂದೂಡಿದ ಪ್ರಕರಣ ಕೂಡ ನಡೆದಿದೆ. ಈ ಮಧ್ಯೆ ಅಮೆರಿಕಾದ ಮಗುವೊಂದರ ಜನನ ಎಲ್ಲರ ಗಮನ ಸೆಳೆದಿದೆ.

ಅಮೆರಿಕಾದ ಕೊಲೊರಾಡೋದಲ್ಲಿ ಮಗು ಲೂಸಿಯಾನಾ ಕ್ಯಾಸ್ಟಿಲೋ ಜನನ ಆಗಸ್ಟ್ 18,2018 ರ 18 ಗಂಟೆ 18 ನಿಮಿಷಕ್ಕಾಗಿದೆ. ಅಂದ್ರೆ ಮಗು ಹುಟ್ಟಿದ ದಿನಾಂಕ 18-8-2018,ಸಮಯ 18:18.ಅಲ್ಲಿನ ಮೆಡಿಕಲ್ ಸೆಂಟರ್ ಒಂದು ಈ ಬಗ್ಗೆ ಫೇಸ್ಬುಕ್ ನಲ್ಲಿ ಮಾಹಿತಿ ನೀಡಿದೆ.

ಲವ್ಲ್ಯಾಂಡ್ ನ ರಾಕೀಸ್ ನ ಯುಸಿ ಹೆಲ್ತ್ ಮೆಡಿಕಲ್ ಸೆಂಟರ್ ನಲ್ಲಿ ಮಗು ಜನಿಸಿದೆ. ಮಗು ಜನಿಸಿದ ದಿನಾಂಕ ಆಗಸ್ಟ್ 18 ಆಗಿದ್ದು, ಸಮಯ 18:18 ಎಂದು ಫೇಸ್ಬುಕ್ ಪೋಸ್ಟ್ ನಲ್ಲಿ ಹೇಳಲಾಗಿದೆ. ಇದ್ರ ಜೊತೆಗೆ ಆಕೆ ಸಹೋದರಿ ವಯಸ್ಸು ಈಗ 8 ವರ್ಷವೆಂದು ಫೇಸ್ಬುಕ್ ನಲ್ಲಿ ಮಾಹಿತಿ ನೀಡಲಾಗಿದೆ. ಇದಕ್ಕೆ ಫೇಸ್ಬುಕ್ ಬಳಕೆದಾರನೊಬ್ಬ ಕಮೆಂಟ್ ಮಾಡಿದ್ದಾನೆ. ತನ್ನ ಮೊಮ್ಮಗಳು, 8/18, 8:18 ಕ್ಕೆ ಜನಿಸಿದ್ದಳು ಎಂದಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...