alex Certify
ಕನ್ನಡ ದುನಿಯಾ       Mobile App
       

Kannada Duniya

3500 ರೂ. ಪಾವತಿಸಿ 168 ಸೀಟಿನ ವಿಮಾನದಲ್ಲಿ ಏಕಾಂಗಿಯಾಗಿ ಪ್ರಯಾಣಿಸಿದ ಯುವಕ…!

28 ವರ್ಷದ ಯುವಕನೊಬ್ಬ ತನ್ನ ಜೀವಮಾನದಲ್ಲಿ ಇಂಥದ್ದೊಂದು ಅಪೂರ್ವ ಅವಕಾಶ ಲಭಿಸಬಹುದೆಂಬ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಇಂತಹ ಅಭೂತಪೂರ್ವ ಅವಕಾಶ ಗಿಟ್ಟಿಸಿಕೊಂಡ ಯುವಕನ ವಿಚಾರ ಇಂಟರ್ ನೆಟ್ ನಲ್ಲಿ ಈಗ ವೈರಲ್ ಆಗಿದೆ.

ಸಾದ್ ಜಿಲಾನಿ ಎಂಬ ಯುವಕನೇ ಈ ಅದೃಷ್ಟವಂತನಾಗಿದ್ದು, ಈತ ಜುಲೈ 21 ರಂದು ಜೆಟ್ 2 ಏರ್ ವೇಸ್ ವಿಮಾನದಲ್ಲಿ ಗ್ರೀಸ್ ನಿಂದ ಬ್ರಿಟನ್ ಗೆ ಪ್ರಯಾಣಿಸಲು 3500 ರೂ. ಪಾವತಿಸಿ ಮುಂಗಡ ಟಿಕೆಟ್ ಕಾಯ್ದಿರಿಸಿದ್ದ.

ಜುಲೈ 21ರಂದು ವಿಮಾನ ನಿಲ್ದಾಣಕ್ಕೆ ಬಂದ ಸಾದ್ ಜಿಲಾನಿಗೆ ಅಚ್ಚರಿ ಕಾದಿತ್ತು. 168 ಸೀಟುಗಳುಳ್ಳ ಬೋಯಿಂಗ್ 738 ವಿಮಾನದಲ್ಲಿ ಈತನೊಬ್ಬನೇ ಪ್ರಯಾಣಿಕನಾಗಿದ್ದ. ಈತನನ್ನು ಸ್ವಾಗತಿಸಿದ ವಿಮಾನ ಸಿಬ್ಬಂದಿ ಬಳಿಕ ಕಾಕ್ ಪಿಟ್ ನಲ್ಲಿ ಕೂರಿಸಿ ಮಾಹಿತಿ ನೀಡಿದ್ದಾರೆ. ತನಗೆ ದಕ್ಕಿದ ವಿಶಿಷ್ಟ ಅನುಭವವನ್ನು ಜೀವಮಾನದಲ್ಲೇ ಮರೆಯಲಾರೆ ಎಂದು ಸಾದ್ ಜಿಲಾನಿ ಹೇಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...