alex Certify
ಕನ್ನಡ ದುನಿಯಾ       Mobile App
       

Kannada Duniya

10 ಸೆಕೆಂಡ್ ಗಳಲ್ಲಿ 15 ಮಹಡಿಯ ಕಟ್ಟಡದ ಸ್ಥಿತಿ ಹೇಗಾಗಿದೆ ಗೊತ್ತಾ?

ಚೀನಾದಲ್ಲಿ ದಶಕಗಳಷ್ಟು ಹಳೆಯದಾದ ಬೃಹತ್ ಕಟ್ಟಡವೊಂದನ್ನು ಕೆಲವೇ ಕ್ಷಣಗಳಲ್ಲಿ ಧ್ವಂಸ ಮಾಡಲಾಗಿದೆ. ಚೆಂಗ್ಡು ಎಂಬಲ್ಲಿ 15 ಮಹಡಿಗಳ ಈ ಕಟ್ಟಡವಿತ್ತು. ಅದನ್ನು ಸರ್ಕಾರವೇ ತೆರವು ಮಾಡಿದೆ.

ಕಟ್ಟಡ ತೆರವು ಕಾರ್ಯಾಚರಣೆಯಲ್ಲಿ ಪಕ್ಕದ ಬಿಲ್ಡಿಂಗ್ ನಲ್ಲಿ ವಾಸವಾಗಿದ್ದ ವ್ಯಕ್ತಿಯೊಬ್ಬ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾನೆ. ಕಟ್ಟಡದಲ್ಲಿದ್ದ ಜನರನ್ನೆಲ್ಲ ಮೊದಲು ತೆರವು ಮಾಡಿದ, ಪೊಲೀಸರು ನಂತರ ಡೆಮಾಲಿಶನ್ ಮಾಡಿದ್ದಾರೆ.

150 ಅಡಿ ಎತ್ತರದ ಈ ಕಟ್ಟಡ ಕೇವಲ 10 ಸೆಕೆಂಡ್ ಗಳಲ್ಲಿ ಸಂಪೂರ್ಣ ಧೂಳುಮಯವಾಗಿ ಅದೃಶ್ಯವಾಗಿದೆ. ಈ ವಿಸ್ಮಯಕಾರಿ ದೃಶ್ಯ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಟ್ಟಡ ಧ್ವಂಸದ ಬಳಿಕ ಸುತ್ತಮುತ್ತಲ ಪ್ರದೇಶದಲ್ಲಿ ನೀರು ಹನಿಸಲಾಗಿದೆ. ಕಟ್ಟಡದ ಧೂಳು ಮಣ್ಣಿನಲ್ಲಿ ಸೇರಿ ಹೋಗಲಿ ಎಂಬ ಕಾರಣಕ್ಕೆ ಸಿಬ್ಬಂದಿ ಈ ರೀತಿ ಮಾಡಿದ್ದಾರೆ. ಈ ಕಟ್ಟಡದಲ್ಲಿ ಹೋಟೆಲ್, ಥೀಮ್ ಪಾರ್ಕ್, ಕಚೇರಿಗಳು ಹಾಗೂ ಶಾಪಿಂಗ್ ಮಾಲ್ ಸಹ ಇತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...