alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದಾಖಲೆ ನಿರ್ಮಿಸಿದ್ದಾರೆ 99 ವರ್ಷದ ಈಜು ಪಟು

ಜಾರ್ಜ್ ಕೊರೊನ್ಸ್ ಆಸ್ಟ್ರೇಲಿಯಾದ ಈಜುಪಟು. ಅವರಿಗೆ ಈಗ 99ರ ಹರೆಯ. ಜಾರ್ಜ್ ಈಜು ಕಲಿಯಲು ಶುರು ಮಾಡಿದ್ದು 80 ವರ್ಷದವರಿದ್ದಾಗ. ಗೋಲ್ಡ್ ಕೋಸ್ಟ್ ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ ಸಿದ್ಧತಾ ಪಂದ್ಯದಲ್ಲಿ ವಿಶ್ವದಾಖಲೆ ಮಾಡಿದ್ದಾರೆ.

Congratulations to this legend, 99 year old George Corones who has broken a world record at the Commonwealth Games…

Posted by ABC Sydney on Wednesday, February 28, 2018

ಕೇವಲ 56.12 ಸೆಕೆಂಡ್ ಗಳಲ್ಲಿ 50 ಮೀಟರ್ ಫ್ರೀಸ್ಟೈಲ್ ಸ್ವಿಮ್ಮಿಂಗ್ ಮಾಡಿದ್ದಾರೆ ಜಾರ್ಜ್. ವೃದ್ಧರ ಸ್ಪರ್ಧೆಯಲ್ಲಿ ಯಾರೂ ಇಷ್ಟೊಂದು ವೇಗವಾಗಿ ಈಜಿರಲಿಲ್ಲ. ಇದೇ ಎಪ್ರಿಲ್ ತಿಂಗಳು ಬಂದ್ರೆ ಜಾರ್ಜ್ 100ನೇ ವರ್ಷಕ್ಕೆ ಕಾಲಿಡಲಿದ್ದಾರೆ.

ಜಾರ್ಜ್ ಸಾಧನೆ ಬಗ್ಗೆ ಆಸ್ಟ್ರೇಲಿಯಾದ ಡಾಲ್ಫಿನ್ಸ್ ಸ್ವಿಮ್ ಟೀಮ್ ಫೇಸ್ಬುಕ್ ನಲ್ಲಿ ಪ್ರಕಟಿಸಿದೆ. ಜಾರ್ಜ್ ಗೆ ಮೊದಲಿನಿಂದ್ಲೂ ಸ್ವಿಮ್ಮಿಂಗ್ ಬಗ್ಗೆ ಆಸಕ್ತಿ ಇತ್ತು. ಆದ್ರೆ ಯಾವತ್ತೂ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. 80 ವರ್ಷದವರಿದ್ದಾಗ ಈಜಬೇಕು ಅನ್ನೋ ಹುಮ್ಮಸ್ಸು ಹೆಚ್ಚಾಗಿತ್ತು.

ಹಾಗಾಗಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ರು. ಸಾಧನೆಗೆ ವಯಸ್ಸು ಅಡ್ಡಿಯಾಗೋದಿಲ್ಲ ಅನ್ನೋದಕ್ಕೆ ಜಾರ್ಜ್ ಜೀವಂತ ನಿದರ್ಶನ. ಇಡೀ ಜಗತ್ತಿಗೆ ಪ್ರೇರಣೆಯಾಗ್ತಾರೆ ಈ ಸಾಧಕ.

We have just witnessed history in the making! 100 year old George Corones just broke the world record in the 50m Freestyle!!#AUSTRIALS2018

Posted by Australian Dolphins Swim Team on Wednesday, February 28, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...