alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಯುವತಿಗೆ ಏನು ಶಿಕ್ಷೆ ಕೊಟ್ಟರೂ ಕಡಿಮೆಯೇ..!

459942-old-woman12.02.16

ಅಲ್ಜಿಮರ್ಸ್ ಕಾಯಿಲೆಯಿಂದ ಬಳಲುತ್ತಿದ್ದ 94 ವರ್ಷದ ವೃದ್ದ ಮಹಿಳೆಯೊಬ್ಬರಿಗೆ ಆಕೆಯ ಆರೈಕೆ ಮಾಡುತ್ತಿದ್ದ ಯುವತಿಯೊಬ್ಬಳು ಥರಹೇವಾರಿ ಹಿಂಸೆ ನೀಡುತ್ತಿರುವ ದೃಶ್ಯದ ವಿಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.

ಬ್ಯೂನಸ್ ಐರೀಸ್ ನಲ್ಲಿ ಈ ಘಟನೆ ನಡೆದಿದ್ದು, ಆನಾರೋಗ್ಯದಿಂದ ಬಳಲುತ್ತಿದ್ದ ತನ್ನ ತಾಯಿಯ ಶುಶ್ರೂಷೆಗೆಂದು ಯುವತಿಯೊಬ್ಬಳನ್ನು ನೇಮಿಸಿಕೊಂಡಿದ್ದ ಮಹಿಳೆ, ಯುವತಿಯ ವರ್ತನೆ ಬಗ್ಗೆ ಅನುಮಾನಗೊಂಡು ಗುಟ್ಟಾಗಿ ಈ ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡು ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದಾರೆ.

ವೃದ್ದ ಮಹಿಳೆಯ ಕೂದಲು ಹಿಡಿದು ಎಳೆಯುವುದು, ಕಾಲಿನಿಂದ ಒದೆಯುವುದೂ ಸೇರಿದಂತೆ ಹಲವು ರೀತಿಯಲ್ಲಿ ಯುವತಿ ಚಿತ್ರಹಿಂಸೆ ನೀಡಿದ್ದು, ಇದೀಗ ಆಕೆಯ ವಿರುದ್ದ ದೂರು ದಾಖಲಿಸಲು ವೃದ್ದೆಯ ಪುತ್ರಿ ಮುಂದಾಗಿದ್ದಾರೆ. ಯುವತಿಯ ಈ ಆನಾಗರೀಕ ವರ್ತನೆಗೆ ಸಾಮಾಜಿಕ ಜಾಲ ತಾಣದಲ್ಲಿ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...