alex Certify
ಕನ್ನಡ ದುನಿಯಾ       Mobile App
       

Kannada Duniya

130 ಹೆಂಡಿರ ಗಂಡ, 203 ಮಕ್ಕಳ ತಂದೆ ಇನ್ನಿಲ್ಲ

muslim-die

130 ಪತ್ನಿಯರು ಹಾಗೂ 203 ಮಕ್ಕಳನ್ನು ಹೊಂದಿದ್ದ ನೈಜೀರಿಯಾದ 93ರ ಹರೆಯದ ಮೊಹಮ್ಮದ್ ಬೆಲ್ಲೋ ಅಬೂಬಕರ್ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ. ನೈಜೀರಿಯಾದ ಬಿಡಾ ರಾಜ್ಯದಲ್ಲಿ ನೆಲೆಸಿದ್ದ ಅಬೂಬಕರ್ 130 ಮಹಿಳೆಯರನ್ನು ವಿವಾಹವಾಗಿದ್ದ. ಅವರಲ್ಲಿ 10 ಪತ್ನಿಯರಿಗೆ ವಿಚ್ಛೇದನ ನೀಡಿದ್ದ. ಸದ್ಯ 97 ಹೆಂಡತಿಯರು ಅವನ ಜೊತೆಗಿದ್ದರು.

ಮೂಲಗಳ ಪ್ರಕಾರ ಆತನ ಪತ್ನಿಯರಲ್ಲಿ ಕೆಲವರು ಈಗ ಗರ್ಭಿಣಿಯಾಗಿದ್ದಾರಂತೆ. ನಾಲ್ವರು ಪತ್ನಿಯರನ್ನು ಹೊಂದಲು ಸಂಪ್ರದಾಯದಂತೆ ಅವಕಾಶವಿದೆ. ಆದ್ರೆ ತನಗೆ ದೇವರ ಆದೇಶವಾಗಿದೆ ಎಂದು ಹೇಳಿಕೊಳ್ಳುತ್ತಿದ್ದ ಅಬೂಬಕರ್, 130 ಮಹಿಳೆಯರನ್ನು ವರಿಸಿದ್ದ. 2008 ರಲ್ಲೇ 86 ಪತ್ನಿಯರನ್ನು ಹೊಂದಿದ್ದ ಅಬೂಬಕರ್ ಇಡೀ ವಿಶ್ವದ ಗಮನ ಸೆಳೆದಿದ್ದ. ಪತ್ರಕರ್ತರಿಗೆ ಸಂದರ್ಶನ ನೀಡಿದ್ದ.

ನಂತರ ಶರಿಯಾ ಕೋರ್ಟ್ ಆದೇಶದಂತೆ ಆತನನ್ನು ಬಂಧಿಸಲಾಗಿತ್ತು. 86 ಹೆಂಡತಿಯರ ಪೈಕಿ 82 ಮಂದಿಗೆ ವಿಚ್ಛೇದನ ನೀಡಬೇಕೆಂಬ ಷರತ್ತಿನ ಮೇರೆಗೆ ಆತನನ್ನು ಬಿಡುಗಡೆ ಮಾಡಲಾಗಿತ್ತು. ಆದ್ರೆ ಆತ ಕೋರ್ಟ್ ಆದೇಶ ಪಾಲಿಸಲು ನಿರಾಕರಿಸಿದ್ದ. ಮತ್ತೆ ಮತ್ತೆ ಮದುವೆಯಾಗುತ್ತಲೇ ಇದ್ದ, ಅವನ ಪತ್ನಿಯರ ಸಂಖ್ಯೆ 130ಕ್ಕೆ ತಲುಪಿತ್ತು. ಅಬೂಬಕರ್ ಗೆ ಒಟ್ಟು 203 ಮಕ್ಕಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...