alex Certify
ಕನ್ನಡ ದುನಿಯಾ       Mobile App
       

Kannada Duniya

91ರ ಹರೆಯದಲ್ಲಿ ಪದವಿ ಪಡೆದಿದ್ದಾಳೆ ಈ ಮಹಿಳೆ

degree

ಥೈಲ್ಯಾಂಡ್  ನಲ್ಲಿ 91 ವರ್ಷದ ವೃದ್ಧೆ ಕಾಲೇಜು ಪದವಿ ಪಡೆದಿದ್ದಾಳೆ. 10 ವರ್ಷ ಕಷ್ಟಪಟ್ಟು ಓದಿ ಡಿಪ್ಲೊಮಾ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿರುವ ವೃದ್ಧೆಗೆ ಥೈಲ್ಯಾಂಡ್ ರಾಜ ಪದವಿ ಪ್ರಧಾನ ಮಾಡಿದ್ರು.

ಕಿಮ್ಲನ್ ಜಿನಾಕುಲ್ ಎಂಬ ಮಹಿಳೆಗೆ ಈಗ 91ರ ಹರೆಯ. ‘ಸುಖೋತಿ ಥಮ್ಮತಿರಾತ್ ಓಪನ್ ಯೂನಿವರ್ಸಿಟಿ’ಯಲ್ಲಿ ಈಕೆ ಕಲಾ ವಿಷಯದಲ್ಲಿ ಪದವಿ ಮುಗಿಸಿದ್ದಾಳೆ. ಶಿಕ್ಷಣ ಜೀವನಕ್ಕೆ ಅತ್ಯಂತ ಅನಿವಾರ್ಯ. ಚೆನ್ನಾಗಿ ಓದದೇ ಇದ್ರೆ ಬದುಕೇ ನಿರರ್ಥಕ ಅಂತಾ ಪದವಿ ಪಡೆದ ಬಳಿಕ ಕಿಮ್ಲನ್ ಜಿನಾಕುಲ್ ಹೇಳಿದ್ದಾಳೆ.

ಕಳೆದ ವರ್ಷವಷ್ಟೆ ಥೈಲ್ಯಾಂಡ್ ರಾಜನಾಗಿ ಅಧಿಕಾರ ಸ್ವೀಕರಿಸಿರುವ ಕಿಂಗ್ ಮಹಾ ವಜಿರ್ ಲಾಂಗ್ಕೊರ್ನ್ ರಿಂದ ಪದವಿ ಸ್ವೀಕರಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾಳೆ. ಥೈಲ್ಯಾಂಡ್ ನ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಡಿಪ್ಲೊಮಾ ಪದವಿಯನ್ನು ರಾಜಮನೆತನದವರೇ ಪ್ರದಾನ ಮಾಡುವುದು ಸಂಪ್ರದಾಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...