alex Certify
ಕನ್ನಡ ದುನಿಯಾ       Mobile App
       

Kannada Duniya

ಟಿನೇಜ್ ನಲ್ಲಿ ಮಾಡಿದ ತಪ್ಪಿಗೆ ಓಲ್ಡ್ ಏಜ್ ನಲ್ಲಿ ಕ್ಷಮೆ ಯಾಚನೆ…!

ವೃದ್ಧಾಪ್ಯ ಅನ್ನೋದು ಮನುಷ್ಯನ ಜೀವನದ ಇಳಿಸಂಜೆಯ ಹಾಗೆ. ಇಡೀ ಜೀವಮಾನದಲ್ಲಿ ಆಡಿದ ತುಂಟಾಟ, ಮಾಡಿದ ತಪ್ಪುಗಳನ್ನೆಲ್ಲಾ ಮೆಲುಕು ಹಾಕುವ ಸಮಯ. ಅಮೆರಿಕದ ಟೆಕ್ಸಾಸ್ನಲ್ಲಿ 90ರ ವಯೋವೃದ್ಧರೊಬ್ಬರು ತಮ್ಮ ಜೀವನದ ಕ್ಷಣಗಳನ್ನೆಲ್ಲಾ ನೆನಪಿಸಿಕೊಳ್ಳುವ ವೇಳೆ ಪಶ್ಚಾತಾಪ ಕಾಡಿದೆ. ಟೀನೇಜ್ನಲ್ಲಿ ಮಾಡಿದ ತಪ್ಪೊಂದಕ್ಕೆ ಕೂಡಲೇ ಪತ್ರ ಮುಖೇನ ಸಾರ್ವಜನಿಕವಾಗಿ ಕ್ಷಮೆಯನ್ನು ಕೇಳಿದ್ದಾರೆ.

15 ವರ್ಷದ ಪಡ್ಡೆ ಹುಡುಗನಾಗಿದ್ದ ಸಮಯದಲ್ಲಿ ಆ ವ್ಯಕ್ತಿ ಸಿಗ್ನಲ್ ಒಂದರಲ್ಲಿದ್ದ ಸ್ಟಾಪ್ ಬೋರ್ಡ್ ಕದ್ದುಬಿಟ್ಟಿದ್ದರು. ಈ ತುಂಟಾಟದ ತಪ್ಪು ಅವರನ್ನ ಜೀವಮಾನದಲ್ಲಿ ಎಂದಾದ್ರು ಒಂದು ದಿನ ಕಾಡುತ್ತೆ ಅನ್ನೋ ಕಲ್ಪನೆಯೇ ಅವರಿಗಿರಲಿಲ್ಲ.

ಆದ್ರೆ ಕಾಲಚಕ್ರ ಮತ್ತೊಮ್ಮೆ ಆ ಘಟನೆಯನ್ನು ಅವರಿಗೆ ನೆನಪು ಮಾಡಿದೆ. ಅಂದು ಮಾಡಿದ್ದು ತುಂಟಾಟವೇ ಆದರೂ ಅದು ತಪ್ಪು ಅನ್ನೋ ಗಿಲ್ಟ್ ಫೀಲ್ ಆಗಿದೆ. ಕೂಡಲೇ ಅವರು ಮಿಡ್ವಾಲೆ ನಗರದ ಆಡಳಿತ ಕಚೇರಿಗೆ ಪತ್ರವನ್ನು ಬರೆದು ಕ್ಷಮಾಪಣೆಯನ್ನ ಕೇಳಿದ್ದಾರೆ. ಅಷ್ಟೇ ಅಲ್ಲ ಸ್ಟಾಪ್ ಸಿಗ್ನಲ್ ಬೋರ್ಡ್ ಕದ್ದಿದ್ದ ತಪ್ಪಿಗೆ 50 ಡಾಲರ್ ದಂಡವನ್ನು ಕಟ್ಟಿದ್ದಾರೆ.

ಮಿಡ್ವಾಲೆ ನಗರದ ಆಡಳಿತ ಕಚೇರಿ, ಈ ಘಟನೆಗೆ ಆಶ್ಚರ್ಯವನ್ನು ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ. ಸುದ್ದಿಯನ್ನು ಟ್ವಿಟ್ಟರ್ನಲ್ಲಿ ಪ್ರಕಟಿಸಿದೆ. ಪಶ್ಚಾತ್ತಾಪದಿಂದ ಕೊರಗಬೇಡಿ ಅಂತ ಆ ವ್ಯಕ್ತಿಗೆ ಮರುಸಂದೇಶ ಕಳಿಸೋಕೆ ಮಿಡ್ವಾಲೆ ಆಡಳಿತ ಕಚೇರಿ ಪ್ರಯತ್ನಿಸುತ್ತಿದೆ. ಆದ್ರೆ ಲೆಟರ್ನಲ್ಲಿ ಆತ ತನ್ನ ವಿಳಾಸವನ್ನ ಬರೆದಿಲ್ಲ. ಹಾಗಾಗಿ ಟ್ವಿಟ್ಟರ್ನಲ್ಲೇ ಆ ವ್ಯಕ್ತಿಗೆ ಗಿಲ್ಟ್ ಫೀಲ್ ನಿಂದ ಹೊರ ಬಂದು ನೆಮ್ಮದಿಯಾಗಿರಿ ಅಂತ ಸಂದೇಶ ರವಾನಿಸಿದೆ. ಪಶ್ಚಾತಾಪಕ್ಕಿಂತ ದೊಡ್ಡ ಶಿಕ್ಷೆ ಇಲ್ಲ ಅನ್ನೋದು ಇದಕ್ಕೇ ಅಲ್ವೇ…?

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...