alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದರನ ಪ್ರಾಣ ಉಳಿಸಿದ ಪುಟ್ಟ ಬಾಲೆ

ಕೆನಡಾದಲ್ಲಿ ಸೆಲೆಬ್ರಲ್​ ಪಾಲ್ಸಿಯಿಂದ ಬಳಲುತ್ತಿರುವ 9 ವರ್ಷದ ಬಾಲಕಿ ತನ್ನ ಸಹೋದರನ ಜೀವ ಉಳಿಸಿದ್ದಾಳೆ.

ಆಕೆಯ ಬರ್ತಡೆ ಪಾರ್ಟಿ ಮಾಡಲು ಕುಟುಂಬ ತಯಾರಿ ನಡೆಸುತ್ತಿತ್ತು. ಇನ್ನೇನು ಸ್ನೇಹಿತರು ಮನೆಗೆ ಆಗಮನಿಸಬೇಕಿತ್ತು ಅಷ್ಟೇ…ಆಗ ಲೆಕ್ಸಿ ಮನೆಯ ಹಿಂಬದಿ ಇರುವ ಈಜು ಕೊಳದಲ್ಲಿ ತನ್ನ, ಒಂದು ವರ್ಷದ ಸಹೋದರ ನೀರಿಗೆ ಬೀಳುತ್ತಿರೋದನ್ನು ನೋಡಿದ್ದಾಳೆ.

ಬೇರೆಯವರ ಚಿತ್ತವನ್ನು ತನ್ನತ್ತ ಸೆಳೆಯಲು ಲೆಕ್ಸಿ ಚೀರಿದ್ದಾಳೆ. ಇವಳ ಧ್ವನಿಯನ್ನು ಕೇಳಿದಾಕ್ಷಣ ಪೋಷಕರು ಧಾವಿಸಿದ್ದು, ಲೆಕ್ಸಿ ಈಜು ಕೊಳದತ್ತ ಕೈ ಮಾಡಿ ತೋರಿಸಿದ್ದಾಳೆ. ಮಗು ಈಜು ಕೊಳದಲ್ಲಿ ಬಿದ್ದು ಒದ್ದಾಡುತ್ತಿರುವುದನ್ನು ಕಂಡು ಲೆಕ್ಸಿ ಅಜ್ಜಿ ಅಲ್ಲಿಗೆ ಹೋಗಿ ಮಗುವನ್ನು ರಕ್ಷಿಸಿದ್ದಾರೆ.

ಅಂದಹಾಗೆ ಲೆಕ್ಸಿಗೆ ಸೆಲೆಬ್ರಲ್​ ಪಾಲ್ಸಿ ಎಂಬ ಕಾಯಿಲೆ ಇದ್ದು, ಅವಳಿಗೆ ಮಾತನಾಡಲು ಹಾಗೂ ನಡೆಯಲು ಬಾರದು. ಆದ್ರೂ, ತನ್ನ ಸಹೋದರನ ಪ್ರಾಣ ಉಳಿಸಿದ ಲೆಕ್ಸಿಗೆ ಈಗ​​​ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...