alex Certify
ಕನ್ನಡ ದುನಿಯಾ       Mobile App
       

Kannada Duniya

ಒಟ್ಟಿಗೆ 12 ಐಫೋನ್ ಖರೀದಿ ಮಾಡಿದ್ದಾನೆ ಈ ಗ್ರಾಹಕ

ಮೊಬೈಲ್ ಮಾರುಕಟ್ಟೆಯಲ್ಲಿ ಐಫೋನ್ 8 ಸಂಚಲನವನ್ನೇ ಮೂಡಿಸಿದೆ. ದುಬೈನಲ್ಲಂತೂ ಐಫೋನ್ 8 ಹಾಗೂ 8ಪ್ಲಸ್ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಶನಿವಾರವಷ್ಟೆ ಮಾರಾಟ ಆರಂಭವಾಗಿದ್ದು, ಸಾವಿರಾರು ಫೋನ್ ಗಳು ಈಗಾಗ್ಲೇ ಮಾರಾಟವಾಗಿವೆ.

ಯುಎಇಯಲ್ಲಿರೋ ದುಬೈ ಮಾಲ್ ಹಾಗೂ ಅಬುಧಾಬಿಯ ಯಸ್ ಮಾಲ್ ನಲ್ಲಿ ಐಫೋನ್ ಮಾರಾಟ ಮಾಡಲಾಗ್ತಿದೆ. ಐಫೋನ್ 8ಗಿಂತ್ಲು ಹೆಚ್ಚಾಗಿ ಐಫೋನ್ ಎಕ್ಸ್ ಬಗ್ಗೆ ಗ್ರಾಹಕರಲ್ಲಿ ಕಾತರ ಜಾಸ್ತಿಯಾಗಿದೆ. ನವೆಂಬರ್ 4ರಂದು ಐಫೋನ್ ಎಕ್ಸ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಇಬ್ರಾಹಿಂ ಅಲ್ಚಾಂಸಿ ದುಬೈನಲ್ಲಿ ಐಫೋನ್ 8 ಖರೀದಿ ಮಾಡಿದ ಮೊದಲ ಗ್ರಾಹಕ. ಅವರು ಒಂದಲ್ಲ, ಎರಡಲ್ಲ ಒಟ್ಟು 12 ಮೊಬೈಲ್ ಗಳನ್ನು ಕೊಂಡುಕೊಂಡಿದ್ದಾರೆ. ಐಫೋನ್ ಕೊಳ್ಳಲು ಪತ್ನಿ ಹಾಗೂ ಮಕ್ಕಳು ಕೂಡ ಜೊತೆಗೆ ಆಗಮಿಸಿದ್ರು. ಅವರ ಮನೆಯಲ್ಲಿ ಎಲ್ಲರೂ ಐಫೋನ್ ಬಳಸ್ತಾರಂತೆ, ಆ ಪುಟ್ಟ ಮಕ್ಕಳು ಕೂಡ. ಹಾಗಾಗಿ ಒಟ್ಟು 12 ಫೋನ್ ಗಳನ್ನು ಇಬ್ರಾಹಿಂ ಒಟ್ಟಿಗೆ ಖರೀದಿಸಿದ್ದಾರೆ.

ಇಬ್ರಾಹಿಂ ಐಫೋನ್ ಎಕ್ಸ್ ಮೇಲೂ ಕಣ್ಣಿಟ್ಟಿದ್ದಾರೆ. ಅಕ್ಟೋಬರ್ 27ರಂದು ಪ್ರಿ ಬುಕ್ಕಿಂಗ್ ಆರಂಭವಾಗುತ್ತಿದ್ದು, ಐಫೋನ್ ಎಕ್ಸ್ ಕೂಡ ಖರೀದಿ ಮಾಡಲು ಉತ್ಸುಕರಾಗಿದ್ದಾರೆ. ಐಫೋನ್ ಎಕ್ಸ್ ನಲ್ಲಿ ಆ್ಯಪಲ್ ಕಂಪನಿ ಸಾಕಷ್ಟು ಬದಲಾವಣೆ ಮಾಡಿರುವುದರಿಂದ ಗ್ರಾಹಕರು ಅದನ್ನು ಕೊಳ್ಳಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...