alex Certify
ಕನ್ನಡ ದುನಿಯಾ       Mobile App
       

Kannada Duniya

88 ವರ್ಷದ ವೃದ್ಧೆಗೆ ಒಲಿದು ಬಂತು ಡಾಕ್ಟರೇಟ್

ಜಪಾನ್ ನಲ್ಲಿ 88 ವರ್ಷದ ವೃದ್ಧೆಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ. ಕ್ಯೋಟೋ ನಗರದಲ್ಲಿರುವ ವಿಶ್ವವಿದ್ಯಾನಿಲಯದಲ್ಲಿ ಆಕೆಗೆ ಡಾಕ್ಟರೇಟ್ ನೀಡಲಾಯ್ತು. ಈ ಪದವಿ ಪಡೆದ ಜಪಾನ್ ನ ಅತ್ಯಂತ ಹಿರಿಯ ಮಹಿಳೆ ಈಕೆ.

ಕಿಯೊಕೊ ಒಕಿ ರಿಟ್ಸುಮೈಕನ್ ಯೂನಿವರ್ಸಿಟಿಯಲ್ಲಿ ಸಂಶೋಧಕಿಯಾಗಿದ್ದರು. ಜಪಾನ್ ನ ಪ್ರಾಚೀನ ವಸ್ತ್ರಸಂಸ್ಕೃತಿಯ ಕುರಿತಂತೆ ಕಿಯೊಕೊ ನಡೆಸಿದ ಸಂಶೋಧನೆಯ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ ನೀಡಲಾಗಿದೆ.

1929ರಲ್ಲಿ ನಗೋಯಾ ಎಂಬಲ್ಲಿ ಈ ಮಹಿಳೆ ಜನಿಸಿದ್ದರು. ಎರಡನೇ ವಿಶ್ವಯುದ್ಧ ಮುಗಿಯುವಷ್ಟರಲ್ಲಿ ಆಕೆಗೆ 16 ವರ್ಷವಾಗಿತ್ತು. ಕಾಲೇಜಿಗೆ ಹೋಗುವ ಅವಕಾಶವೇ ಸಿಕ್ಕಿರಲಿಲ್ಲ. ಪತಿಯಿಂದ ವಿಚ್ಛೇದನ ಪಡೆದ ಬಳಿಕ ಜೀವನ ನಿರ್ವಹಣೆಗಾಗಿ ಕಾಲೇಜಿಗೆ ಕೆಲಸಕ್ಕೆ ಹೋಗುತ್ತಿದ್ರು.

ಮನೆಯಲ್ಲೇ ವಿದ್ಯಾರ್ಥಿಗಳಿಗೆ ಅರ್ಥಶಾಸ್ತ್ರ ವಿಷಯವನ್ನು ಪಾಠ ಮಾಡುತ್ತಿದ್ರು. ಈ ಸಂದರ್ಭದಲ್ಲೇ ಆಕೆಗೆ ಸಂಶೋಧನೆಯ ಬಗ್ಗೆ ಆಸಕ್ತಿ ಮೂಡಿತ್ತು. 30 ವರ್ಷಗಳಲ್ಲಿ 165 ಸ್ಥಳಗಳಿಗೆ ಭೇಟಿ ಕೊಟ್ಟು ಜಪಾನ್ ನ ಪುರಾತನ ವಸ್ತ್ರಸಂಸ್ಕೃತಿ ಬಗ್ಗೆ ಪ್ರಬಂಧ ಸಿದ್ಧಪಡಿಸಿದ್ದರು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...